ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೂರಜ್ ಒಬ್ಬ ಮೋಸಗಾರ: ಡೆತ್‌ನೋಟ್‌ನಲ್ಲಿ ಜಿಯಾ ಆರೋಪ

ಕಳೆದ ವಾರ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟಿ ಜಿಯಾ ಖಾನ್ ಅವರು ಬರೆದಿಟ್ಟಿದ್ದ ಡೆತ್‌ನೋಟ್ ವಿವರ ಬಹಿರಂಗಗೊಂಡಿದ್ದು,...

Lingaraj Badiger
Updated On : 10 Jun 2013, 2:28 am

ಮುಂಬೈ: ಕಳೆದ ವಾರ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟಿ ಜಿಯಾ ಖಾನ್ ಅವರು ಬರೆದಿಟ್ಟಿದ್ದ ಡೆತ್‌ನೋಟ್ ವಿವರ ಸೋಮವಾರ ಬಹಿರಂಗಗೊಂಡಿದ್ದು, ತನ್ನ ಬಾಯ್‌ಫ್ರೆಂಡ್ ಸೂರಜ್ ಪಂಚೋಲಿ ಒಬ್ಬ ಮೋಸಗಾರ, ಅವನಿಂದ ನಾನು ಮೋಸಹೋದೆ ಎಂದು ಜಿಯಾ ಖಾನ್ ಹೇಳಿಕೊಂಡಿದ್ದಾರೆ.

ಜಿಯಾ ಬರೆದಿರುವ ಆರು ಪುಟಗಳ ಡೆತ್‌ನೋಟ್ ಪತ್ತೆಯಾಗಿದ್ದು, ಆ ಪತ್ರದಲ್ಲಿ, ಗೋವಾ ಟ್ರಿಪ್‌ಗೆ ಹೋಗಿ ಬಂದ ಮೇಲೆ ಸೂರಜ್ ನನ್ನನ್ನು ದೂರ ಮಾಡಿದ. ಅವನಿಗಾಗಿ ನಾನು ಗರ್ಭಪಾತ ಮಾಡಿಕೊಂಡು ನನ್ನ ಕರುಳ ಕುಡಿಯನ್ನೇ ಕೊಂದೆ. ಒಂದು ವರ್ಷದೊಳಗೆ ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಒಂದು ವರ್ಷ ಕಳೆದರೂ ಮದುವೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ಬೇರೆ ಹುಡಿಗಿಯರೊಂದಿಗೆ ಸಂಬಂಧವಿಟ್ಟುಕೊಂಡಿದ್ದ ಎಂದೂ ದೂರಿದ್ದಾರೆ.

ಜಿಯಾ ಪತ್ರದ ಸಂಪೂರ್ಣ ವಿವಿರ...: 'ನಿನಗಾಗಿ ನಾನು ಎಲ್ಲವನ್ನೂ ಧಾರೆಯೆರೆದೆ. ಆದರೆ ನೀನು ನನ್ನ ಪ್ರೀತಿಯನ್ನು ಯಾವತ್ತು ಅರ್ಥ ಮಾಡಿಕೊಳ್ಳಲಿಲ್ಲ. ನನ್ನ ಪ್ರೀತಿಯನ್ನು ಗೌರವಿಸದೆ, ನನ್ನ ಸಂತೋಷವನ್ನೇ ಕಿತ್ತುಕೊಂಡೆ. ನೀನು ನನ್ನ ಭವಿಷ್ಯವನ್ನು ಮತ್ತು ನನ್ನ ಜೀವನವನ್ನೇ ಸಂಪೂರ್ಣ ನಾಶ ಮಾಡಿದೆ. ಇದರಿಂದ ನನ್ನ ವಿಶ್ವಾಸ ಹಾಗೂ ಆತ್ಮಗೌರವವೇ ಸತ್ತುಹೋಗಿದೆ'.

ನಾನು ನಿನ್ನ ಬಗ್ಗೆ ತೋರಿದ ಕಾಳಜಿಯನ್ನು ಮತ್ತೆ ಯಾರಿಗೂ ತೋರಿಲ್ಲ. ನನ್ನ ಬಗ್ಗೆಯೂ ಅಷ್ಟೊಂದು ಕಾಳಜಿ ತೋರಲಿಲ್ಲ. ಆದರೆ ನೀನು ಬರೀ ಮೋಸ ಮತ್ತು ಸುಳ್ಳುಗಳನ್ನೇ ಹೇಳುತ್ತ ನನ್ನ ಪ್ರೀತಿಯನ್ನು ನನಗೆ ಮರುಳಿಸಿದೆ. ನಿನ್ನೊಂದಿಗಿನ ಸಂಬಂಧದಿಂದಾಗಿ ನಾನೆಲ್ಲಿ ಗರ್ಭಿಣಿಯಾಗುತ್ತೇನೋ ಎಂಬ ಭಯವಿದ್ದರೂ ನಿನಗೆ ನನ್ನನ್ನು ನಾನೇ ಸಮರ್ಪಿಸಿಕೊಂಡೆ. ಅದರ ನೋವು ನನಗೇ ಮಾತ್ರ ಗೊತ್ತು. ಆದರೆ ನೀನು ನನ್ನ ಆತ್ಮವನ್ನೇ ಕೊಂದು ಬಿಟ್ಟೆ. ನನಗೆ ಊಟ, ನಿದ್ದೆ, ವಿಚಾರ ಸೇರಿದಂತೆ ಸಾಮಾನ್ಯ ಕೆಲಸ ಯಾವುದನ್ನು ಮಾಡಲಾಗುತ್ತಿಲ್ಲ. ಈಗ ನನ್ನ ವೃತ್ತಿ ಜೀವನದ ಬಗ್ಗೆ ಮೋಹ ಹೊರಟುಹೋಗಿದೆ. ಹೀಗಾಗಿ ಎಲ್ಲದರಿಂದ ನಾನು ದೂರ ಹೋಗುತ್ತಿದ್ದೇನೆ.

ನಿನ್ನನ್ನು ಮೊದಲು ಭೇಟಿಯಾದಾಗ ಮಹತ್ವಾಕಾಂಕ್ಷೆ, ಶಿಸ್ತು ನನ್ನನ್ನು ಸೇಳೆದಿತ್ತು. ಹೀಗಾಗಿ ನಿನ್ನೆ ಮೋಹದಲ್ಲಿ ಬಿದ್ದುಬಿಟ್ಟೆ. ನಿನ್ನ ಪ್ರೀತಿ ನನ್ನಲ್ಲಿ ಹೆಚ್ಚಿನ ಸಾಧನೆ ಮಾಡಲು ಹುಮ್ಮಸ್ಸು ನೀಡುತ್ತದೆ ಎಂದು ಕೊಂಡಿದ್ದೆ. ಆದರೆ ಆಮೇಲೆ ನಮ್ಮಿಬ್ಬರನ್ನು ಆ ವಿಧಿ ಯಾಕೆ ಒಂದುಗೂಡಿಸಿತೋ ಅನಿಸಿತು. ನಿನ್ನಿಂದಾದ ನೋವು, ಅತ್ಯಾಚಾರ, ದೌರ್ಜನ್ಯ, ಹಿಂಸೆ ಯಾವುದಕ್ಕೂ ನಾನು ಅರ್ಹಳಲ್ಲ. ಕೊನೆಗೆ ತಿಳಿದಿದ್ದೇನೆಂದರೆ, ಅಲ್ಲಿ ಪ್ರೀತಿಯೂ ಇರಲಿಲ್ಲ ಮತ್ತು ಬದ್ಧತೆಯೂ ಇರಲಿಲ್ಲ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನೀನು ನನ್ನನ್ನು ಘಾಸಿಗೊಳಿಸಿದೆ ಎಂದು ಜಿಯಾ ಹೇಳಿಕೊಂಡಿದ್ದಾಳೆ.

ನಿನಗೆ ಪಾರ್ಟಿ ಮತ್ತು ಹುಡುಗಿಯರೇ ಜೀವನವಾಗಿದೆ. ನಾನಿನ್ನೂ ಭೂಮಿಯ ಮೇಲಿದ್ದರೆ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ. ಆದ್ದರಿಂದ 10 ವರ್ಷಗಳ ನನ್ನ ವೃತ್ತಿ ಬದುಕಿಗೆ ಗುಡ್ ಬೈ ಹೇಳುತ್ತಿದ್ದೇನೆ. ನೀನು ನನಗೆ ಮೋಸ ಮಾಡಿದೆ. ನಾನು ಯಾರೊಂದಿಗೂ ಹೋಗಿಲ್ಲ. ಕಾರ್ತಿಕ್ ಎಂಬ ವ್ಯಕ್ತಿಯನ್ನು ಭೇಟಿಯೂ ಮಾಡಿಲ್ಲ. ನಿನ್ನನ್ನು ನಾನು ಪ್ರೀತಿಸಿದಷ್ಟು ಬೇರೆ ಯಾವ ಹುಡುಗಿಯೂ ಪ್ರೀತಿಸುವುದಿಲ್ಲ. ಬೇಕಿದ್ದರೆ ಇದನ್ನು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ ಬಾಲಿವುಡ್ ನಟಿ.

ನಾನು ನಿನಗಾಗಿ ಯಾವತ್ತೂ ಒಳ್ಳೆಯದನ್ನೇ ಬಯಸಿದೆ. ನನ್ನಲ್ಲಿದ್ದ ಅಲ್ಪ ಹಣವನ್ನು ನಿನಗಾಗಿ ಖರ್ಚು ಮಾಡಲು ಸಿದ್ಧವಿದ್ದೆ. ಗೋವಾ ಟ್ರಿಪ್ ನಿನ್ನ ಹುಟ್ಟು ಹಬ್ಬಕ್ಕಾಗಿ ನೀಡಿದ ಗಿಫ್ಟ್. ನೀನು ಮೋಸ ಮಾಡುತ್ತಿರುವುದು ತಿಳಿದಿದ್ದರೂ ನಿನಗಾಗಿ ನನ್ನ ಸಮಯ ಹಣ ಎಲ್ಲವನ್ನೂ ಮೀಸಲಿಟ್ಟೆ. ಆದರೆ ನೀನು ನನ್ನನ್ನು ಮತ್ತಷ್ಟು ಘಾಸಿಮಾಡಿದೆ. ಇಷ್ಟವಿಲ್ಲದಿದ್ದರೂ ಗರ್ಭಪಾತ ಮಾಡಿಸಿಕೊಂಡೆ. ಆದರೂ ನೀನು ನನ್ನ ಹುಟ್ಟು ಹಬ್ಬದ ಸಂಭ್ರಮ ಹಾಳುಮಾಡಿದೆ. ಅಲ್ಲದೆ ಪ್ರೇಮಿಗಳ ದಿನದಂದೂ ನನ್ನಿಂದ ದೂರವಿದ್ದೆ ಎಂದು ಜಿಯಾಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement