ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಡ್ವಾಣಿ ರಾಜಿನಾಮೆ ವಾಪಸ್ ಸಾಧ್ಯತೆ

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಪಕ್ಷದ ಎಲ್ಲ ಸ್ಥಾನಗಳಿಗೆ ನೀಡಿರುವ ರಾಜಿನಾಮೆಯನ್ನು ಹಿಂದಕ್ಕೆ ಪಡೆಯುವಂತೆ ಬಿಜೆಪಿ...

Vishwanath S
Updated On : 11 Jun 2013, 4:21 am

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಪಕ್ಷದ ಎಲ್ಲ ಸ್ಥಾನಗಳಿಗೆ ನೀಡಿರುವ ರಾಜಿನಾಮೆಯನ್ನು ಹಿಂದಕ್ಕೆ ಪಡೆಯುವಂತೆ ಬಿಜೆಪಿ ನಾಯಕರು ನಡೆಸಿದ ಯತ್ನ ಫಲ ನೀಡಿದ್ದು, ಆಡ್ವಾಣಿ ಅವರು ತಮ್ಮ ರಾಜಿನಾಮೆಯನ್ನು ಹಿಂಪಡೆಯುವ ಸಾಧ್ಯತೆ ಇದೆ.

ಇಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಆಡ್ವಾಣಿ ಅವರ ಆಪ್ತರಾಗಿರುವ ಜಸ್ವಂತ್ ಸಿಂಗ್, ಆಡ್ವಾಣಿ ಅವರನ್ನು ಭೇಟಿಯಾಗಿ ಅವರ ಮನವೊಲಿಕೆಗೆ ಯತ್ನಿಸಿದರು. ಆಡ್ವಾಣಿ ಅವರ ನಿವಾಸದೆದುರು ಸುದ್ದಿಗಾರರೊಂದಿಗೆ ಮಾತನಾಡಿದ ಜಸ್ವಂತ್ ಸಿಂಗ್, ಆಡ್ವಾಣಿ ಅವರು ನೀಡಿರುವ ರಾಜಿನಾಮೆಯನ್ನು ಹಿಂದಕ್ಕೆ ಪಡೆಯುತ್ತಾರೆ ಎಂಬ ಭರವಸೆ ತಮಗೆ ಇದೆ ಎಂಬ ಆಶಯ ವ್ಯಕ್ತಪಡಿಸಿದರು. ಜೊತೆಗೆ ಬಿಜೆಪಿಯಲ್ಲಿ ಇತ್ತೀಚಿನ ಕೆಲವೊಂದು ಬದಲಾವಣೆಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.  

ಪಕ್ಷದ ಬಗ್ಗೆ ಆಡ್ವಾಣಿ ಅವರು ಅಪಾರ ಕಾಳಜಿ ಹೊಂದಿದ್ದಾರೆ. ಅವರು ಪಕ್ಷದ ಮೇಲೆ ಇಟ್ಟಿದ್ದ ನಂಬಿಕೆಗೆ ಧಕ್ಕೆಯಾಗಿದ್ದರಿಂದ ಮನನೊಂದು ರಾಜಿನಾಮೆ ನೀಡಿದ್ದು, ಅವರು ರಾಜಿನಾಮೆ ಹಿಂಪಡೆಯುವ ಭರವಸೆ ಇದೆ ಎಂದರು.

ಆಡ್ವಾಣಿ ಅವರು ತಮ್ಮ ರಾಜಿನಾಮೆ ಪತ್ರದಲ್ಲಿ ಪಕ್ಷವನ್ನು ಕೆಲವರು ತಮ್ಮ ಸ್ವಂತ ಸಾಧನೆಗಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಪಕ್ಷದಲ್ಲಿ ಆಂತರಿಕ ಹಿತಾಸಕ್ತಿ ಹೆಚ್ಚಾಗಿದ್ದು, ಇಂತಹ ಬೆಳವಣೆಗೆಯಿಂದ ಬೇಸತ್ತು ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಪಕ್ಷದಲ್ಲಿ ಕೆಲವೊಂದು ಬದಲಾವಣೆಯನ್ನು ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement