ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್, ದಾಸರಿ ವಿರುದ್ಧ ಎಫ್ಐಆರ್
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಸಂಬಂಧ ಸಂಸದ ನವೀನ್ ಜಿಂದಾಲ್ ಹಾಗೂ ಮಾಜಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವ...
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಸಂಬಂಧ ಸಂಸದ ನವೀನ್ ಜಿಂದಾಲ್ ಹಾಗೂ ಮಾಜಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವ ದಾಸರಿ ನಾರಾಯಣರಾವ್ ಅವರ ವಿರುದ್ಧ ಸಿಬಿಐ ಮಂಗಳವಾರ ಹೊಸ ಎಫ್ಐಆರ್ ದಾಖಲಿಸಿದೆ. ಅಲ್ಲದೆ ಈ ಸಂಬಂಧ ಸಿಬಿಐ ದೆಹಲಿ ಹಾಗೂ ಹೈದರಾಬಾದ್ನಲ್ಲಿ 15 ಕಡೆ ದಾಳಿ ನಡೆಸಿದೆ.
ನವೀನ್ ಜಿಂದಾಲ್ ಒಡೆತನದ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್, ಗಗನ್ ಸ್ಪೊಂಗ್ ಮತ್ತು ಇತರ ಎರಡು ಕಂಪನಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಜಿಂದಾಲ್ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಜಿಂದಾಲ್ ಸ್ಟೀಲ್ ಕಂಪನಿ ಷೇರುಗಳ ಮೌಲ್ಯದಲ್ಲಿ ಶೇ.20ರಷ್ಟು ಕುಸಿತ ಕಂಡಿದೆ.