ಜಿಯಾ ಪ್ರಿಯತಮ ಸೂರಜ್ ಪೊಲೀಸ್ ವಶಕ್ಕೆ
ಮುಂಬೈ: ಪ್ರೇಮ ವೈಪಲ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದ ನಟಿ ಜಿಯಾ ಖಾನ್‌ರ ಪ್ರಿಯತಮ ಸೂರಜ್ ಪಂಚೋಲಿಯನ್ನು ಹೆಚ್ಚಿನ ವಿಚಾರಣೆಗಾಗಿ ಜೂನ್ 13ವರೆಗೆ ಪೊಲೀಸರ ವಶಕ್ಕೆ ನ್ಯಾಯಾಲಯ ಆದೇಶಿಸಿದೆ.
ಆತ್ಮಹತ್ಯೆಗು ಮುನ್ನ ಜಿಯಾಖಾನ್ ಬರೆದಿದ್ದ 6 ಪುಟಗಳ ಡೆಟ್‌ನೋಟ್ ನಿನ್ನೆ ಬಹಿರಂಗವಾಗುತ್ತಿದ್ದಂತೆ ಸೂರಜ್‌ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ಜೂ.13ವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಜಿಯಾ ತಮ್ಮ ಡೆತ್‌ನೋಟ್‌ನಲ್ಲಿ ಪ್ರಿಯತಮ ಸರೋಜ್ ನನಗೆ ಮೋಸ ಮಾಡಿದ್ದಾನೆ ಹಾಗೂ ನನ್ನನ್ನು ನಂಬಿಸಿ ಕೈ ಬಿಟ್ಟಿದ್ದಾನೆ. ಇದರಿಂದ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲಿದ್ದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆದಿದ್ದರು. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೋಮವಾರ ಸೂರಜ್‌ನನ್ನು ಬಂಧಿಸಿದ್ದರು.