ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರತಿಪಕ್ಷಗಳಿಗೆ ಮಣಿದ ಸರ್ಕಾರ, ಪಂಚಾಯತ್‌ರಾಜ್ ವಿಧೇಯಕಕ್ಕೆ ಮತ್ತೆ ತಿದ್ದುಪಡಿ

ಪ್ರತಿಪಕ್ಷಗಳ ವಿರೋಧಕ್ಕೆ ಮಣಿದ ಸರ್ಕಾರ, ಕರ್ನಾಟಕ ಪಂಜಾಯತ್‌ರಾಜ್ ವಿಧೇಯಕಕ್ಕೆ ಮತ್ತೆ ತಿದ್ದುಪಡಿ ತಂದು...

Lingaraj Badiger
Updated On : 12 Jun 2013, 2:05 am

ಬೆಂಗಳೂರು: ಪ್ರತಿಪಕ್ಷಗಳ ವಿರೋಧಕ್ಕೆ ಮಣಿದ ಸರ್ಕಾರ, ಕರ್ನಾಟಕ ಪಂಜಾಯತ್‌ರಾಜ್ ವಿಧೇಯಕಕ್ಕೆ ಮತ್ತೆ ತಿದ್ದುಪಡಿ ತಂದು ಸದನದಲ್ಲಿ ಮಂಡಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.

ನಿಧಾಸಭೆಯಲ್ಲಿ ಮಂಡನೆಯಾದ ಕರ್ನಾಟಕ ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕಕ್ಕೆ ಇಂದು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಕಠೋರ ಶಾಸನ ಎಂದು ಹೇಳಿವೆ.

ಮಂಗಳವಾರ ಮಂಡನೆಯಾದ ಪಂಜಾಯತ್‌ರಾಜ್ ತಿದ್ದುಪಡಿ ವಿಧೇಯಕದ ಕುರಿತು ಇಂದು ಚರ್ಚೆ ಆರಂಭವಾಗಿದ್ದು, ತಿದ್ದುಪಡಿ ಮೂಲಕ ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರದ ನಿಲುವಿಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಗ್ರಾಮ ಪಂಚಾಯತ್ ಸದಸ್ಯರೇ ಗ್ರಾಮ ಸಭೆ ನಡೆಸುವುದು ಕಷ್ಟ. ಒಂದು ಸಭೆ ನಡೆಸದಿದ್ದರೆ ಅವರ ಸದಸ್ಯತ್ವ ರದ್ದು ಮಾಡುವ ನಿರ್ಧಾರ ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟರು. ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷದ ನಾಯಕರು ಸ್ಪೀಕರ್ ಅವರೇ ಅಪಾಯ ಎನ್ನುತ್ತಿರುವಾಗ ತಿದ್ದುಪಡಿ ತರುವುದು ಬೇಡ ಎಂದು ಒತ್ತಾಯಿಸಿದರು. ಅಲ್ಲದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಪಕ್ಷಗಳ ಗದ್ದಲದಿಂದಾಗಿ ಸ್ಪೀಕರ್ ಅವರು ಸದನವನ್ನು ಒಂದು ಗಂಟೆಗಳ ಕಾಲ ಮುಂದೂಡಿದರು.

ಮತ್ತೆ ಸದನ ಆರಂಭವಾಗುತ್ತಿದ್ದೆ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದವು. ಇದಕ್ಕೆ ಮಣಿದ ಸರ್ಕಾರ ಮತ್ತೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿತು. ಇದರಿಂದ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದವು.

ಈಗೀರುವ ವಿಧೇಯಕದ ಮುಖ್ಯಾಂಶಗಳು:
ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು ಪ್ರತಿ 6 ತಿಂಗಳಿಗೊಮ್ಮೆ ಗ್ರಾಮ ಸಭೆ ನಡೆಸುವುದು ಕಡ್ಡಾಯ. ಒಂದು ವೇಳೆ ಗ್ರಾಮ ಸಭೆ ನಡೆಸದಿದ್ದರೆ ಸದಸ್ಯತ್ವ ರದ್ದು. ಅಷ್ಟೇ ಅಲ್ಲ ಗ್ರಾಮ ಪಂಚಾಯತ್ ಸದಸ್ಯರು ಅಥವಾ ಅಧ್ಯಕ್ಷರು ದುರ್ನಡತೆ ತೋರಿದರೆ ಆಗಲೂ ಸದಸ್ಯತ್ವದಿಂದ ಅನರ್ಹಗೊಳಿಸಲಾಗುತ್ತದೆ.

ರಾಜ್ಯದಲ್ಲಿ ಗ್ರಾಮ ಸಭೆಗಳು ಸರಿಯಾಗಿ ನಡೆಯದೆ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕದೇ ಇರುವುದು, ಸಮಸ್ಯೆಗಳು ಇತ್ಯರ್ಥಗೊಳ್ಳದೇ ಇರುವುದನ್ನು ಮನಗಂಡ ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು. ಅದರಂತೆ ಇದೀಗ ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಮಂಡಿಸಿದೆ. ಗ್ರಾಮ ಸಭೆಗಳನ್ನು ನಡೆಸದೇ ಹೋದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಜವಾಬ್ದಾರಿ ಹೊಂದಿರುವ ಸದಸ್ಯರನ್ನು ಅನರ್ಹಗೊಳಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸದಸ್ಯತ್ವ ರದ್ದುಗೊಳಿಸುವ ಅಧಿಕಾರವನ್ನು  ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement