ಬುಗ್ತಿ ಹತ್ಯೆ ಪ್ರಕರಣ: ಮುಷರಫ್ ಬಂಧನ
ಅಕ್ಬರ್ ಬುಗ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಬಲೂಚಿಸ್ತಾನ ಪೊಲೀಸರು...
ಇಸ್ಲಾಮಾಬಾದ್: ಅಕ್ಬರ್ ಬುಗ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಬಲೂಚಿಸ್ತಾನ ಪೊಲೀಸರು ಗುರುವಾರ ಅಧಿಕೃತವಾಗಿ ಬಂಧಿಸಿದ್ದಾರೆ.
ಬುಗ್ತಿ ಹತ್ಯೆ ಪ್ರರಣದ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಆರೋಪಿ ಮುಷರಫ್ ಅವರಿಗೆ ಎರಡು ವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
2006ರಲ್ಲಿ ನಡೆದ ಸೇನಾ ಕಾರ್ಯಚರಣೆಯಲ್ಲಿ ಬಲೂಚಿಸ್ಥಾನದ ಮುಖಂಡ ನವಾಬ್ ಅಕ್ಬರ್ ಬುಗ್ತಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥನಾಗಿದ್ದ ಮುಷರಫ್ ಅವರೆ ಹತ್ಯೆ ಪ್ರಕರಣದ ಸೂತ್ರಧಾರ ಎಂಬ ಕಾರಣಕ್ಕಾಗಿ ಪೊಲೀಸರು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್ನ ಮುಷರಫ್ ಅವರ ಫಾರ್ಮ್ಹೌಸ್ನಲ್ಲಿ ಪೊಲೀಸರು ಬಂಧಿಸಿದ್ದು, ಮುಷರಫ್ ಅವರ ಫಾರ್ಮ್ಹೌಸ್ನ್ನೆ ಸಬ್ ಜೈಲಾಗಿ ಪರಿವರ್ತನೆ ಮಾಡಿ ಪ್ರಕರಣದ ವಿಚಾರಣೆಯನ್ನು ಅಲ್ಲೇ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.