ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಲನಚಿತ್ರ ಆಕಾಡೆಮಿ ಅಧ್ಯಕ್ಷೆ ಸ್ಥಾನದಿಂದ ತಾರಾ ವಜಾ

ಕನ್ನಡ ಚಲನಚಿತ್ರ ಆಕಾಡೆಮಿ ಅಧ್ಯಕ್ಷೆ ಸ್ಥಾನದಿಂದ ನಟಿ ತಾರಾ ಅವರನ್ನು ವಜಾಗೊಳಿಸಿ ರಾಜ್ಯ..

Lingaraj Badiger
Updated On : 15 Jun 2013, 4:55 am

ಬೆಂಗಳೂರು: ಕನ್ನಡ ಚಲನಚಿತ್ರ ಆಕಾಡೆಮಿ ಅಧ್ಯಕ್ಷೆ ಸ್ಥಾನದಿಂದ ನಟಿ ತಾರಾ ಅವರನ್ನು ವಜಾಗೊಳಿಸಿ ರಾಜ್ಯ ಸರ್ಕಾರ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.

ಬಿಜೆಪಿ ವಿಧಾನ ಪರಿಷತ್ ಸದಸ್ಯೆಯಾಗಿರುವ ತಾರಾ ಅವರನ್ನು ಬಿಜೆಪಿ ಸರ್ಕಾರ ಚಲನಚಿತ್ರ ಆಕಾಡೆಮಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಎಲ್ಲ ನಿಗಮ ಮಂಡಳಿ ಹಾಗೂ ಆಕಾಡೆಮಿಗಳ ಅಧ್ಯಕ್ಷರು, ಉಪಾಧ್ಯಕ್ಷರು ರಾಜಿನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಾಯ್ಯ ಅವರು ಸೂಚಿಸಿದ್ದರು. ಆದರೆ ರಾಜಿನಾಮೆ ನೀಡದ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ತಾರಾ ಅವರನ್ನು ವಾಜಾಗೊಳಿಸಿದೆ.

ಇನ್ನು ಸರ್ಕಾರದ ವಜಾ ಆದೇಶಕ್ಕೆ ಪ್ರತಿಕ್ರಿಯಿಸಿರುವ ತಾರಾ, ನಾನು ಮೇ 24ರಂದೇ ಅಧ್ಯಕ್ಷೆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಆದರೆ ಮುಖ್ಯಮಂತ್ರಿಗಳು ನನ್ನ ರಾಜಿನಾಮೆಯನ್ನು ಅಂಗೀಕರಿಸಿರಲಿಲ್ಲ. ಈಗ ವಜಾಗೊಳಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement