ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಂದ್ರ ಸಚಿವ ಸಂಪುಟ ಪುನರಚನೆ: ಆಸ್ಕರ್ ಸೇರಿ 8 ಮಂದಿ ಪ್ರಮಾಣ

ಕೇಂದ್ರದ ಯುಪಿಎ ಸರ್ಕಾರ ತನ್ನ ಸಚಿವ ಸಂಪುಟವನ್ನು ಪುನರಚಿಸಿದ್ದು, ಸಂಪುಟಕ್ಕೆ ಹೊಸದಾಗಿ 8 ಮಂದಿ ಸಚಿವರು ಸೇರ್ಪಡೆಯಾಗಿದ್ದಾರೆ.

Vishwanath S
Updated On : 17 Jun 2013, 7:24 am

ನವದೆಹಲಿ: ಕೇಂದ್ರದ ಯುಪಿಎ ಸರ್ಕಾರ ತನ್ನ ಸಚಿವ ಸಂಪುಟವನ್ನು ಪುನರಚಿಸಿದ್ದು, ಸಂಪುಟಕ್ಕೆ ಹೊಸದಾಗಿ 8 ಮಂದಿ ಸಚಿವರು ಸೇರ್ಪಡೆಯಾಗಿದ್ದಾರೆ. ರಾಜ್ಯದ ಆಸ್ಕರ್ ಫನಾಂರ್ಡಿಸ್ ಸೇರಿದಂತೆ 8 ಮಂದಿ ಸಚಿವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ ಪ್ರತಿಜ್ಞಾ ವಿಧಿ ಬೋಧಿಸಿದರು.

ರಾಷ್ಟ್ರಪತಿ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ನಿಷ್ಠಾವಂತಾ 8 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ರೇಲ್ವೆ ಖಾತೆ ನೀಡಲಾಗಿದೆ.

ಹೊಸ ಕ್ಯಾಬಿನೆಟ್ ಸಚಿವರು
ಆಸ್ಕರ್ ಫನಾಂರ್ಡಿಸ್ -ರಸ್ತೆ ಸಾರಿಗೆ ಖಾತೆ
ಗಿರಿಜಾ ವ್ಯಾಸ - ವಸತಿ, ನಗರಾಭಿವೃದ್ದಿ ಖಾತೆ
ಸಿಸ್‌ರಾಮ್ - ಕಾರ್ಮಿಕ ಖಾತೆ
ಕೆ.ಎಸ್. ರಾವ್ - ಜವಳಿ ಖಾತೆ

ಹೊಸ ರಾಜ್ಯ ಸಚಿವರು
ಇಎಂಎಸ್ ನಾಚ್ಚಿಯಾಪ್ಪನ್ -ಕೈಗಾರಿಕಾ ಖಾತೆ
ಜೆ.ಡಿ. ಶೀಲಂ - ಹಣಕಾಸು  ಖಾತೆ
ಮಾಣಿಕ್‌ರಾವ್  -ಸಾಮಾಜಿಕ ನ್ಯಾಯ ಖಾತೆ
ಸಂತೋಷ ಚೌದರಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಲಭಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement