ಬಿಜೆಪಿ ಸಚಿವರ ವಜಾ ಖಂಡಿಸಿ ನಾಳೆ ಬಿಹಾರ್ ಬಂದ್
ಎನ್ಡಿಎದೊಂದಿಗಿನ ಮೈತ್ರಿ ಮುರಿದಕೊಂಡ ನಂತರ ತಮ್ಮ ಸಂಪುಟದ ಬಿಜೆಪಿ ಸಚಿವರನ್ನು ವಜಾಗೊಳಿಸಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ...
ಪಾಟ್ನಾ: ಎನ್ಡಿಎದೊಂದಿಗಿನ ಮೈತ್ರಿ ಮುರಿದಕೊಂಡ ನಂತರ ತಮ್ಮ ಸಂಪುಟದ ಬಿಜೆಪಿ ಸಚಿವರನ್ನು ವಜಾಗೊಳಿಸಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರಮವನ್ನು ಖಂಡಿಸಿ ಬಿಜೆಪಿ ನಾಳೆ ಬಿಹಾರ್ ಬಂದ್ಗೆ ಕರೆ ನೀಡಿದೆ.
ಸಚಿವರ ವಜಾ ಕ್ರಮವನ್ನು ಖಂಡಿಸಿರುವ ಬಿಜೆಪಿ ನಾಯಕ, ವಜಾಗೊಂಡಿರುವ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ನಾಳೆ ಬಿಹಾರ್ ಬಂದ್ಗೆ ಕರೆ ಕೊಟ್ಟಿದ್ದಾರೆ.
ಪಾಟ್ನಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಚಿವರನ್ನು ಸಚಿವ ಸ್ಥಾನದಿಂದ ಇದ್ದಕ್ಕಿದಂತೆ ವಜಾ ಮಾಡಿರುವ ಮುಖ್ಯಮಂತ್ರಿಗಳ ಕ್ರಮ ಬಿಜೆಪಿಯ ಸಚಿವರಿಗೆ ಮಾಡಿರುವ ಅಪಮಾನ. ಜೆಡಿಯುನ ಈ ಕ್ರಮ ಸರಿಯಲ್ಲ. ಜೆಡಿಯು ಅನುಚಿತವಾಗಿ ವರ್ತಿಸುತ್ತಿದೆ. ಹೀಗಾಗಿ ನಾಳೆ ಬಿಹಾರ್ ಬಂದ್ ನಡೆಸುವುದಾಗಿ ಹೇಳಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಗೆ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಬಿಜೆಪಿಯ 11 ಸಚಿವರು ಸಭೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಜೆಡಿಯು ಬಿಜೆಪಿ ಸಚಿವರನ್ನು ಸೋಮವಾರ ವಜಾ ಮಾಡಿದೆ. ಜೆಡಿಯುನ ಕ್ರಮವನ್ನು ಖಂಡಿಸಿರುವ ಬಿಜೆಪಿ ನಾಯಕರು ನಾಳೆ ಬಿಹಾರ್ ಬಂದ್ಗೆ ಕರೆ ನೀಡಿದ್ದಾರೆ.