ಡಾಲರ್ ಎದುರು ರುಪಾಯಿ ದಾಖಲೆ ಕುಸಿತ
ಅಮೆರಿಕದ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ ಗುರುವಾರ ಸರ್ವಕಾಲಿಕ ದಾಖಲೆಯ ಕುಸಿತ..
ಮುಂಬೈ: ಅಮೆರಿಕದ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ ಗುರುವಾರ ಸರ್ವಕಾಲಿಕ ದಾಖಲೆಯ ಕುಸಿತ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ವಹಿವಾಟು ಆರಂಭದದಲ್ಲೇ ಡಾಲರ್ ಎದುರು ರುಪಾಯಿ ಮೌಲ್ಯ 130 ಪೈಸೆಯಷ್ಟು ಇಳಿಯಾಗಿ ಪ್ರತಿ ಡಾಲರ್‌ಗೆ 60 ರುಪಾಯಿಗೆ ಕುಸಿಯಿತು.
ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಕರೆನ್ಸಿ ಎದುರು ಡಾಲರ್ ಮೌಲ್ಯದಲ್ಲಿ ಚೇತರಿಕೆ ಕಂಡಿದ್ದು, ರುಪಾಯಿ ಮೌಲ್ಯ ಮತ್ತಷ್ಟು ಕುಸಿಯಲು ಕಾರಣವಾಯಿತು. ಯುಎಸ್ ರಿಸರ್ವ್ ಚೇರ್ಮನ್ ಬೆರ್ನಾಂಕೆ ಪ್ರಕಾರ, ಭಾರತದಲ್ಲಿನ ಈಕ್ವಿಟಿ ಹಾಗೂ ವಿದೇಶಿ ಬಾಂಡ್ ಮಾರಾಟ ಅಧಿಕವಾಗಲಿದೆ. ಇದರಿಂದ ಡಾಲರ್ ಬೇಡಿಕೆ ಹೀಗೆ ಮುಂದುವರೆಯುವುದರಿಂದ ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಬುಧವಾರ ದಿನದ ಅಂತ್ಯಕ್ಕೆ ರುಪಾಯಿ ಮೌಲ್ಯ 58.70 ಇತ್ತು. ಆದರೆ ಇಂದು ದಿಢೀರ್ 130 ಪೈಸೆಯಷ್ಟು ಕುಸಿತ ಕಂಡಿದ್ದು, ರುಪಾಯಿ ಮೌಲ್ಯ ಇನ್ನು ಕುಸಿಯುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ದೇಶದ ಷೇರುಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರುಪಾಯಿ ಮೌಲ್ಯ ಇಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಷೇರುದಾರರಲ್ಲಿ ಆತಂಕವನ್ನುಂಟು ಮಾಡಿದೆ.