ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಬಹುಮಾನ
2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಕಾರಣವಾದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗು 1 ಕೋಟಿ ರು. ಮೊತ್ತದ ನಗದು...
ನವದೆಹಲಿ: 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಕಾರಣವಾದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗು 1 ಕೋಟಿ ರು. ಮೊತ್ತದ ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಘೋಷಿಸಿದೆ.
ಬನಿಂರ್ಗ್ಹ್ಯಾಮ್ನಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 5 ರನ್ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಭಾರತಕ್ಕೆ 2013ರ ಚಾಂಪಿಯನ್ಸ್ ಟ್ರೋಫಿಯನ್ನು ತಂದ ಸಂತಸದ ಕಾರಣದಿಂದಾಗಿ ತಂಡದ ಪ್ರತಿಯೊಬ್ಬ ಆಟಗಾರನಿಗೆ 1 ಕೋಟಿ ರು. ಘೋಷಿಸಿದ್ದು, ತಂಡದ ಇತರ ಬೆಂಬಲಿತ ಸದಸ್ಯರಿಗೆ ತಲಾ 30 ಲಕ್ಷ ರು. ಬಹುಮಾನ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ.
ಭಾರತ ತಂಡ ಯುವ ಆಟಗಾರರಿಂದ ತುಂಬಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರು 'ಗೋಲ್ಡನ್ ಬಾಲ್' ಹಾಗೂ ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಬ್ಯಾಟ್ ಮಾಡಿ ಸರಣಿಯಲ್ಲಿ 363 ರನ್ ಕಲೆ ಹಾಕಿ ಸರಣಿ ಜಯಕ್ಕೆ ಕಾರಣರಾದ ಶಿಖರ್ ಧವನ್ ಅವರು ಸರಣಿಯಲ್ಲಿ 'ಗೋಲ್ಡನ್ ಬ್ಯಾಟ್' ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.