ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉಗ್ರರ ಉದ್ದೇಶ ಸಫಲವಾಗಲ್ಲ: ಪ್ರಧಾನಿ

ಉಗ್ರರ ವಿರುದ್ಧ ಇಡೀ ದೇಶವೆ ಒಗ್ಗಟ್ಟಾಗಿದೆ. ಹೀಗಾಗಿ ಉಗ್ರರ ಉದ್ದೇಶ ಸಫಲವಾಗುವುದಿಲ್ಲ ಎಂದು ಪ್ರಧಾನಮಂತ್ರಿ ..

Lingaraj Badiger
Updated On : 25 Jun 2013, 1:41 am

ಶ್ರೀನಗರ/ಕಿಶ್ತವಾರ್: ಉಗ್ರರ ವಿರುದ್ಧ ಇಡೀ ದೇಶವೆ ಒಗ್ಗಟ್ಟಾಗಿದೆ. ಹೀಗಾಗಿ ಉಗ್ರರ ಉದ್ದೇಶ ಸಫಲವಾಗುವುದಿಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

850 ಮೇ. ವ್ಯಾಟ್ ವಿದ್ಯುತ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಉಗ್ರರೊಂದಿಗೆ ಹೋರಾಡಿ ತಮ್ಮ ಜೀವವನ್ನು ಬಲಿಕೊಟ್ಟ ಸೈನಿಕರಿಗೆ ಗೌರವ ಸಲ್ಲಿಸುವುದಾಗಿ ತಿಳಿಸಿದರು. ನಿನ್ನೆಯಷ್ಟೇ ಉಗ್ರರು ಸೇನಾ ಪಡೆ ಮೇಲೆ ದಾಳಿ ಮಾಡಿ, ಎಂಟು ಯೋಧರನ್ನು ಹತ್ಯೆ ಮಾಡಿದ್ದರು.

ಇಡೀ ದೇಶವೆ ಉಗ್ರರ ವಿರುದ್ಧ ಒಗ್ಗಟ್ಟಾಗಿ ನಿಂತಿದೆ. ಹೀಗಾಗಿ ಉಗ್ರರು ತಮ್ಮ ಉದ್ದೇಶವನ್ನು ಸಫಲ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. ಅಲ್ಲದೆ ದೇಶದ ಅಭಿವೃದ್ಧಿಗೆ ಭದ್ರತೆ ಅತ್ಯಗತ್ಯ ಎಂದು ಪ್ರಧಾನಿ ಹೇಳಿದರು.

ಈ ವೇಳೆ ಉಪಸ್ಥಿತರಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಹ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸಿದರು.

ಪ್ರಧಾನಿ ಭೇಟಿಯ ಮುನ್ನಾ ದಿನವಾದ ಸೋಮವಾರ ಉಗ್ರರ ಹಠಾತ್ ದಾಳಿಯಿಂದಾಗಿ ಎಂಟು ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೆ 19 ಯೋಧರು ಗಾಯಗೊಂಡಿದ್ದರು. ಶ್ರೀನಗರದ ಹೈದರಾಪೋರಾ ಬೈಪಾಸ್ ಬಳಿ ನಡೆದ ಈ ದಾಳಿಯ ಹೊಣೆಯನ್ನು ಹಿಜ್ಬುಲ್ ಮುಜಾಹಿದೀನ್ ಹೊತ್ತುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement