ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕ್ಸಲ್ ದಾಳಿ: ಇಬ್ಬರ ಸಾವು

Vishwanath S
Updated On : 25 Jun 2013, 7:10 am

ಮುಜಫರ್‌ಪುರ್: ಪೊಲೀಸ್ ಸಮವಸ್ತ್ರಗಳನ್ನು ಧರಿಸಿದ್ದ ನಕ್ಸಲರು ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ(ಪಿಎಸಿಎಸ್)ಯ ಮುಖ್ಯಸ್ಥನ ಮನೆ ಮೇಲೆ ದಾಳಿ ಮಾಡಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಓರ್ವನಿಗೆ ಗುಂಡು ತಗುಲಿದ್ದು, ಆತನ ಪರಿಸ್ಥಿತಿ ಚಿಂತಾಚನಕವಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬಿಹಾರದ ಕುಂದಾನಿ ಗ್ರಾಮದಲ್ಲಿರುವ ಪಿಎಸಿಎಸ್ ಸಂಸ್ಥೆಯ ಮುಖ್ಯಸ್ಥನ ಮನೆಯ ಮೇಲೆ ಕಳೆದ ರಾತ್ರಿ ಸುಮಾರು 24 ಮಂದಿ ನಕ್ಸಲರ ತಂಡ ದಾಳಿ ಮಾಡಿದೆ. ದಾಳಿಯಲ್ಲಿ ಲಕ್ಷಣ ರೈ(60) ಹಾಗೂ ಪ್ರಭಾತ್ ರೈ(25) ನಕ್ಸಲರ ಗುಂಡೆಟಿಗೆ ಬಲಿಯಾಗಿದ್ದಾರೆ. ಅಲ್ಲದೆ ದಾಳಿಯಲ್ಲಿ ರಾಜ್‌ಕುಮಾರ್ ರೈಗೆ ಗುಂಡೇಟು ತಗುಲಿದ್ದು, ಆತನ ಸ್ಥಿತಿ ಗಂಭೀರವಾಗಿ ಎಂದು ಪಶ್ಚಿಮ ವಲಯದ ಉಪ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಹೇಳಿದ್ದಾರೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಾಜ್‌ಕುಮಾರ್ ರೈ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅವರ ಪರಿಸ್ಥಿತಿ ಚಿಂತಾಚನಕವಾಗಿದೆ ಎಂದು ಡಿಎಸ್‌ಪಿ ಹೇಳಿದ್ದಾರೆ.

ಬಡವರನ್ನು ಶೋಷಿಸುವವರ ವಿರುದ್ಧ ಸಮರ ಎಂಬ ಘೋಷಣೆಗಳನ್ನು ಎಲೆಗಳ ಮೇಲೆ ಬರೆದಿದ್ದು, ನಕ್ಸಲರು ಅವುಗಳನ್ನು ಘಟನಾ ಸ್ಥಳದಲ್ಲಿಯೆ ಬಿಟ್ಟು ಹೋಗಿದ್ದಾರೆ. ಬಡವರನ್ನು ವಂಚಿಸಲು ಪ್ರಯತ್ನಿಸುವವರನ್ನು ಕೊಲ್ಲುವುದಾಗಿ ಕೆಲವೊಂದು ಎಚ್ಚರಿಕೆ ಪದಗಳನ್ನು ಬರೆದಿರುವುದಾಗಿ ಡಿಎಸ್‌ಪಿ ತಿಳಿಸಿದ್ದಾರೆ.

ದಾಳಿಗೆ ಸಂಬಂಧಿಸಿದಂತೆ ಅನಾಮಿಕ ನಕ್ಸಲರ ವಿರುದ್ಧ ಪ್ರಕರಣ ದಾಖಲಿಸಿಲಾಗಿದ್ದು, ನಕ್ಸಲರ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement