ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

60 ದಾಟಿದ ರುಪಾಯಿ ಮೌಲ್ಯ

ಮತ್ತೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿದ್ದು, ಬುಧವಾರ ಪ್ರತಿ ಡಾಲರ್ ಗೆ 60.62 ಪೈಸೆಗೆ ತಲುಪಿದೆ...

Mainashree
Updated On : 26 Jun 2013, 4:29 am

ನವದೆಹಲಿ: ಮತ್ತೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿದ್ದು, ಬುಧವಾರ ಪ್ರತಿ ಡಾಲರ್ ಗೆ  60.62 ಪೈಸೆಗೆ ತಲುಪಿದೆ.

ಕಳೆದ ಹಲವು ದಿನಗಳಿಂದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿದ್ದು, ಇದರ ಹೊಡೆತ ಷೇರುಮಾರುಕಟ್ಟೆ ಮೇಲೂ ಆಗಿದೆ.

ಅಮೆರಿಕದ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ ಕುಸಿದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಡಾಲರ್ಗೆ 60.62 ಪೈಸೆಗೆ ತಲುಪಿದೆ.

ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಕರೆನ್ಸಿ ಎದುರು ಡಾಲರ್ ಮೌಲ್ಯದಲ್ಲಿ ಚೇತರಿಕೆ ಕಂಡಿದ್ದು, ರುಪಾಯಿ ಮೌಲ್ಯ ಮತ್ತಷ್ಟು ಕುಸಿಯಲು ಕಾರಣವಾಯಿತು. ಯುಎಸ್ ರಿಸರ್ವ್ ಚೇರ್ಮನ ಬೆನಾಂರ್ಕೆ ಪ್ರಕಾರ, ಭಾರತದಲ್ಲಿನ ಈಕ್ವಿಟಿ ಹಾಗೂ ವಿದೇಶಿ ಬಾಂಡ್ ಮಾರಾಟ ಅಧಿಕವಾಗಲಿದೆ. ಇದರಿಂದ ಡಾಲರ್ ಬೇಡಿಕೆ ಹೀಗೆ ಮುಂದುವರೆಯುವುದರಿಂದ ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ದೇಶದ ಷೇರುಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರುಪಾಯಿ ಮೌಲ್ಯ ಇಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಷೇರುದಾರರಲ್ಲಿ ಆತಂಕವನ್ನುಂಟು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement