ಕಾಂಗ್ರೆಸ್ ಪ್ರಕಾರ ರಾಹುಲ್ ಗಾಂಧಿ 'ಸೂಪರ್ ವಿಐಪಿ': ಬಿಜೆಪಿ ಟೀಕೆ
ನವದೆಹಲಿ: ಉತ್ತರಾಖಂಡದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 'ಸೂಪರ್ ವಿಐಪಿ' ಎಂದು ಭಾರತೀಯ ಜನತಾ ಪಕ್ಷ ಬುಧವಾರ ಟೀಕಿಸಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವುದು ರಾಜಕೀಯ ಉದ್ದೇಶದಿಂದ ಎಂದು ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಆರೋಪಿಸಿದ್ದರು.
ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಭಾರತೀಯ ಜನತಾ ಪಕ್ಷದ ಟೀಕೆಗೆ ಕಾಂಗ್ರೆಸ್ ಗುರಿಯಾಗಿದೆ.
ರಾಜಕೀಯ ಉದ್ದೇಶದಿಂದ ಪ್ರವಾಹ ಪೀಡಿತ ಪ್ರದೇಶಕ್ಕೆ ಯಾವುದೇ ವಿಐಪಿಗಳು ಭೇಟಿ ನೀಡಬಾರದು ಎಂದು ಶಿಂಧೆ ಹೇಳಿದ್ದರು. ಆದರೆ ಈಗ ಕಾಂಗ್ರೆಸ್ ಮುಖಂಡರೇ ಭೇಟಿ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಸೂಪರ್ ವಿಐಪಿಯೇ ಇರಬೇಕು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಹುಲ್ ಗಾಂಧಿಯವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವುದು ಫೋಟೋ ತೆಗಿಸಿಕೊಳ್ಳಲು ಹೊರತು ನೆರೆಸಂತ್ರಸ್ತರಿಗೆ ಸಹಾಯ ಮಾಡಲು ಅಲ್ಲ. ಕಾಂಗ್ರೆಸ್ ಪ್ರಕಾರ ರಾಹುಲ್ ಗಾಂಧಿ 'ಸೂಪರ್ ವಿಐಪಿ' ಎಂದು ಟೀಕಿಸಿದ್ದಾರೆ.