ದೆಹಲಿ ಅತ್ಯಾಚಾರ ಪ್ರಕರಣ: ನಾನು ನಿರಪರಾಧಿ ಎಂದ ಬಾಲಪರಾಧಿ
ನವದೆಹಲಿ: ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲೆ ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಚಾರ ಪ್ರಕರಣದ ಬಾಲ ಆರೋಪಿ ನಾನು ನಿರಪರಾಧಿ ಪ್ರಕರಣದಿಂದ ನನ್ನನ್ನು ಮುಕ್ತಗೊಳಿಸಿ ಎಂದು ಬುಧವಾರ ಬಾಲಪರಾಧ ಮಂಡಳಿಗೆ ಮನವಿ ಮಾಡಿದ್ದಾನೆ.
ಅತ್ಯಾಚಾರವೆಸಗಿರುವ ಆರು ಜನರಲ್ಲಿ ಬಾಲ ಆರೋಪಿ ಪ್ರಮುಖನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆರೋಪವನ್ನು ತಳ್ಳಿಹಾಕಿರುವ ಆರೋಪಿ, ನಾನು ನಿರಪರಾಧಿ. ಪೊಲೀಸರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ.
ಇತ್ತಿಚೆಗಷ್ಟೆ ಬಾಲ ಆರೋಪಿಯಾಗಿದ್ದ ಯುವಕನಿಗೆ 18 ವರ್ಷ ತುಂಬಿದೆ. ಆರೋಪಿ ವಿರುದ್ಧ 6 ಜನರು ಸಾಕ್ಷಿ ಹೇಳಿದ್ದು, ದಾಖಲು ಮಾಡಲಾಗಿದೆ.
ಪ್ರಕರಣವನ್ನು ಬಾಲಪರಾಧ ಮಂಡಳಿ ಜುಲೈ 5ಕ್ಕೆ ಮುಂದೂಡಿದೆ.