ಬಾಂಬ್ ಸ್ಫೋಟ: 7 ಜನ ಸಾವು, ನ್ಯಾಯಾಧೀಶರಿಗೆ ಗಾಯ
ಕರಾಚಿ: ಪಾಕಿಸ್ತಾನದ ನ್ಯಾಯಧೀಶರನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಸ್ಫೋಟಗೊಳಿಸಿರುವ ಘಟನೆ ಬುಧವಾರ ಬೆಳಿಗ್ಗ ಕರಾಚಿಯಲ್ಲಿ ನಡೆದಿದೆ.
ಸಿಂಧ್ ಹೈಕೋರ್ಟ್ ನ್ಯಾಯಾಧೀಶ ಮಕ್ಬುಲ್ ಬಖಿರ್ ಅವರನ್ನು ಗುರಿಯಾಗಿಟ್ಟುಕೊಂಡ ಉಗ್ರರು ಇಂದು ಬಾಂಬ್ ಸ್ಫೋಟಿಸಿದ್ದಾರೆ. ಘಟನೆಯಲ್ಲಿ 7 ಜನರು ಮೃತಪಟ್ಟಿದ್ದು, ನ್ಯಾಯಾಧೀಶರು ಸೇರಿದಂತೆ 15 ಜನ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋಟಾರ್ ಸೈಕಲ್ನಲ್ಲಿ ಬಾಂಬ್ ಇರಿಸಿ, ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟಿಸಿದ್ದಾರೆ. ತಾಲಿಬಾನ್ ಉಗ್ರರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.