ಮೋದಿ ಸಲಹೆ ತಿರಸ್ಕರಿಸಿದ ಉತ್ತರಾಖಂಡ್ ಸಿಎಂ
ಡೆಹ್ರಾಡೂನ್: ಕೇದರ್ನಾಥ ದೇವಸ್ಥಾನ ಪುನರ್ ನಿರ್ಮಾಣ ಮಾಡುವಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿದ್ದ ಸಲಹೆಯನ್ನು ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ್ ಬುಧವಾರ ತಿರಸ್ಕರಿಸಿದ್ದಾರೆ.
ಪ್ರವಾಹದಿಂದ ನಾಶವಾಗಿರುವ ಕೇದರ್ನಾಥ್ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವಂತೆ ಕಳೆದ ವಾರ ನರೇಂದ್ರ ಮೋದಿ, ವಿಜಯ್ ಬಹುಗುಣ್ ಅವರಲ್ಲಿ ಪ್ರಸ್ತಾಪಿಸಿದ್ದರು.
ಪುನರ್ ನಿರ್ಮಾಣಕ್ಕೆ ಗುಜರಾತ್ ರಾಜ್ಯ ಸರ್ಕಾರ ಪೂರ್ಣ ಸಹಕಾರ ನೀಡಲಿದ್ದು, ಜವಬ್ದಾರಿ ವಹಿಸಿಕೊಳ್ಳಲಿದೆ ಎಂದು ಮೋದಿ ಹೇಳಿದ್ದರು.
ಆದರೆ ವಿಜಯ್ ಬಹುಗುಣ ಅವರು ಮೋದಿ ಅವರ ಪ್ರಸ್ತಾವನೆಯನ್ನು ತಳ್ಳಿ ಹಾಕಿದ್ದಾರೆ.