ಉತ್ತರಾಖಂಡನಲ್ಲಿ ಲಘು ಭೂಕಂಪ, ಭೂ ಕುಸಿತದ ಆತಂಕ
ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರಾಖಂಡಗೆ ಈಗ ಪ್ರಕೃತಿ ಮತ್ತೊಂದು ಹೊಡೆತ ನೀಡಿದ್ದು, ಪ್ರವಾಹ ಪೀಡಿತ ..
ಪಿತೋರ್‌ಗಡ: ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರಾಖಂಡಗೆ ಈಗ ಪ್ರಕೃತಿ ಮತ್ತೊಂದು ಹೊಡೆತ ನೀಡಿದ್ದು, ಪ್ರವಾಹ ಪೀಡಿತ ಉತ್ತರಾಖಂಡನಲ್ಲಿ ಗುರುವಾರ ಲಘು ಭೂಕಂಪ ಸಂಭವಿಸಿದೆ. ಇದರಿಂದ ಮತ್ತೆ ಭೂ ಕುಸಿತ ಸಂಭವಿಸುವ ಆತಂಕ ಸೃಷ್ಟಿಯಾಗಿದೆ.
ಇಂದು ಮಧ್ಯಾಹ್ನ ಉತ್ತರಾಖಂಡನ ಪಿತೋರ್‌ಗಡದಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸುತ್ತಿದ್ದಂತೆ ಜನತೆ ಭಯದಿಂದ ಮನೆಯಿಂದ ಹೊರ ಬಂದಿದ್ದಾರೆ.