ಕೇದರ್‌ನಾಥ ರಕ್ಷಣಾ ಕಾರ್ಯಚರಣೆ ಪೂರ್ಣ
ಉತ್ತರಾಖಂಡದ ಕೇದರ್‌ನಾಥದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಚರಣೆ ಗುರುವಾರ ಪೂರ್ಣಗೊಂಡಿದೆ...
ಡೆಹ್ರಾಡೂನ್: ಉತ್ತರಾಖಂಡದ ಕೇದರ್‌ನಾಥದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಚರಣೆ ಗುರುವಾರ ಪೂರ್ಣಗೊಂಡಿದೆ.
ಹವಾಮಾನ ವೈಪರೀತ್ಯದ ನಡುವೆಯು ಕೇದರ್‌ನಾಥ ಕಾರ್ಯಚರಣೆ ಮುಗಿಸಿರುವ ವಾಯುಸೇನೆ, ಮೃತದೇಹಗಳ ಶೋಧ ಕಾರ್ಯ ನಡೆಸುತ್ತಿದೆ. ಕೇದರ್‌ನಾಥದಲ್ಲಿ ಸಿಲುಕಿದ್ದ ಸಾವಿರಾರು ಸಂತ್ರಸ್ತರನ್ನು ರಕ್ಷಿಸಿ ಕಾರ್ಯಚರಣೆ ಪೂರ್ಣಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬದ್ರಿನಾಥ ಮತ್ತು ಹರ್ಸಿಲ್‌ನಲ್ಲಿ 5,000ಕ್ಕೂ ಹೆಚ್ಚು ಭಕ್ತಾದಿಗಳನ್ನು ರಕ್ಷಿಸಲಾಗಿದೆ. ಆದರೆ ಇಂದು ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಚರಣೆಗೆ ಅಡ್ಡಿ ಉಂಟಾಗಿದೆ. ಹರ್ಸಿಲ್ ಬದ್ರಿನಾಥದಲ್ಲಿ ಸಿಲುಕಿರುವ ಸಂತ್ರಸ್ತರು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.
ಘಟನೆಯಲ್ಲಿ 400ಕ್ಕೂ ಹೆಚ್ಚು ಜನರು ಕಾಣಿಯಾಗಿದ್ದು, ಇದರ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ದೊರಕಿಲ್ಲ ಎಂದು ಮೂಲಗಳು ತಿಳಿಸಿವೆ.