ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ಸೂರಜ್ ಬಂಧನಾವಧಿ ವಿಸ್ತರಣೆ
ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಜಿಯಾ ಖಾನ್ ಬಾಯ್‌ಫ್ರೆಂಡ್ ಸೂರಜ್ ಪಂಚೋಲಿ ನ್ಯಾಯಾಂಗ ಬಂಧನಾವಧಿಯನ್ನು ಜುಲೈ 11ರ ವರೆಗೆ ನ್ಯಾಯಾಲಯ ವಿಸ್ತರಿಸಿದೆ.
ಬಾಲಿವುಡ್ ನಟ ಅದಿತ್ಯಾ ಪಂಚೋಲಿಯವರ ಪುತ್ರ ಹಾಗೂ ಜಿಯಾ ಖಾನ್ ಬಾಯ್‌ಫ್ರೆಂಡ್ ಸೂರಜ್ ಪಂಚೋಲಿಯನ್ನು ಇಂದು ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಿದ್ದರು.
ಜಿಯಾ ಖಾನ್ ಆತ್ಮಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ. ನಾನು ನಿರಪರಾಧಿ ತಮಗೆ ಜಾಮೀನು ನೀಡಿ ಎಂದು ಸೂರಜ್ ಪಂಚೋಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಸೂರಜ್ ಪಂಚೋಲಿ ಪ್ರಭಾವ ಶಾಲಿಯಾಗಿದ್ದು, ಸಾಕ್ಷಿಗಳು ನಾಶಪಡಿಸಬಹುದು ಆದ್ದರಿಂದ ಜಾಮೀನು ನೀಡಬಾರುದು ಎಂದು ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಜುಲೈ 11ರ ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದೆ.
ಇದನ್ನು ಪ್ರಶ್ನಿಸಿ ಸೂರಜ್ ಪಂಚೋಲಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಸ್ತುತ ಸೂರಜ್ ಪಂಚೋಲಿ ಅರ್ತೂರ್ ಕೇಂದ್ರ ಜೈಲಿನಲ್ಲಿದ್ದಾರೆ.