ಉತ್ತರಾಖಂಡದಲ್ಲಿ 3000 ಜನರು ನಾಪತ್ತೆ
ಡೆಹ್ರಾಡೂನ್: ಉತ್ತರಾಖಂಡ ಪ್ರವಾಹ ಪೀಡಿತದಿಂದಾಗಿ ಒಟ್ಟು 3ಸಾವಿರ ಯಾತ್ರಿಕರು ಕಾಣೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರವಾಹ ಪೀಡಿತಕ್ಕೆ ಸಿಲುಕಿ ಅನೇಕರ ಗುರುತು ಸಿಗದಂತಾಗಿದ್ದು, ಕಾಣೆಯಾದವರ ಸಂಖ್ಯೆ 3000ಕ್ಕೆ ಏರಿದೆ. ಭದ್ರಿನಾಥದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದ್ದು, 1000 ಸಂತ್ರಸ್ತರು ರಕ್ಷಿಸುವ ಕಾರ್ಯಚರಣೆಯಲ್ಲಿ ವಾಯು ಸೇನೆ ತೊಡಗಿಸಿಕೊಂಡಿದೆ.
ಹವಾಮಾನ ವೈಪರೀತ್ಯದ ನಡುವೆಯು 20 ಹೆಲಿಕಾಪ್ಟರ್‌ಗಳು ಮೂಲಕ ಭದ್ರಿನಾಥದಲ್ಲಿರುವ ಸಂತ್ರಸ್ತರನ್ನು ರಕ್ಷಿಸಲಾಗುತ್ತಿದೆ ಎಂದು ವಾಯು ಸೇನೆ ತಿಳಿಸಿದೆ.
ಘಟನೆಯಲ್ಲಿ 3 ಸಾವಿರ ಜನರು ಕಾಣೆಯಾಗಿದ್ದು, ಅವರ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ. ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಮೃತದೇಹಗಳು ಕೊಚ್ಚಿ ಹೋಗಿವೆ ಎಂದು ವಾಯು ಸೇನೆ ಹೇಳಿದೆ.
ಕಾಣೆಯಾದವರ ಮಾಹಿತಿ ಮತ್ತು ಭಾವಚಿತ್ರವನ್ನು ರಾಜ್ಯ ಸರ್ಕಾರದ ಜಾಲತಾಣದಲ್ಲಿ ಹಾಕಲಾಗಿದ್ದು, ಅಧಿಕಾರಿಗಳಿಗೆ ಅವರನ್ನು ಗುರುತಿಸುವಲ್ಲಿ ಸಹಾಯವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಈವರೆಗೆ 1,04,687 ಜನರನ್ನು ರಕ್ಷಿಸಲಾಗಿದೆ. 1,237 ಜನರು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬೀಡೂರಿದ್ದಾರೆ ಎಂದು ಹೇಳಿದ್ದಾರೆ.