ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ.ಬಂಗಾಳದ ಚುನಾವಣೆ ವೇಳಾಪಟ್ಟಿ ಬದಲಿಸಿದ ಸುಪ್ರೀಂ

Mainashree
Updated On : 28 Jun 2013, 6:45 am

ನವದೆಹಲಿ: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣಾ ವೇಳಾಪಟ್ಟಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಬದಲಿಸಿದೆ.

ಚುನಾವಣಾ ವೇಳಾಪಟ್ಟಿಯನ್ನು ಬದಲಿಸಿರುವ ಸುಪ್ರೀಂ ಕೋರ್ಟ್, ಜುಲೈ 11ರಿಂದ ರಾಜ್ಯದ 5 ಹಂತಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ನ್ಯಾಯಾಮೂರ್ತಿಗಳಾದ ಎ.ಕೆ ಪಟ್ನಾಯಕ್ ಮತ್ತು ರಾಜನ್ ಗೋಗಯ್ ಅವರನ್ನೊಳಗೊಂಡ ನ್ಯಾಯಾಪೀಠ ಆದೇಶ ಹೊರಡಿಸಿದ್ದು, ಜುಲೈ 11, 15, 19, 22, ಮತ್ತು 25ರಂದು ಚುನಾವಣೆ ನಡೆಸಬೇಕು ಎಂದು ಸೂಚಿಸಿದೆ.

ಈ ಮೊದಲು ಆಯೋಗ ಜುಲೈ 2ರಿಂದ ಚುನಾವಣೆ ನಡೆಸಲು ನಿರ್ಧರಿಸಿತ್ತು. ಆಯೋಗದ ವೇಳಾಪಟ್ಟಿಯನ್ನು ಸುಪ್ರೀಂ ಬದಲಿಸಿದ್ದು. ತಾನು ಸೂಚಿರುವ ದಿನಾಂಕಗಳಲ್ಲಿ ಚುನಾವಣೆ ನಡೆಸಬೇಕು ಎಂದು ಆದೇಶಿಸಿದೆ.

ಚುನಾವಣೆ ನಡೆಯುವ ಪ್ರತಿ ಹಂತದಲ್ಲಿ 35,000 ಭದ್ರತಾ ಸಿಬ್ಬಂದಿಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸುಪ್ರೀಂ ಆದೇಶಿಸಿದೆ.

ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ಒದಗಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement