ಬಾಲಿವುಡ್ ನಟ ಆದಿತ್ಯಾ ಪಂಚೋಲಿ ವಿರುದ್ಧ ದೂರು ದಾಖಲು
ನೆರೆ ಮನೆಯವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಆದಿತ್ಯಾ ಪಂಚೋಲಿ ವಿರುದ್ಧ ಶುಕ್ರವಾರ...
ಮುಂಬೈ: ನೆರೆ ಮನೆಯವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಆದಿತ್ಯಾ ಪಂಚೋಲಿ ವಿರುದ್ಧ ಶುಕ್ರವಾರ ದೂರು ದಾಖಲಿಸಲಾಗಿದೆ.
ನೆರೆ ಮನೆಯವರಾದ 55 ವರ್ಷದ ಭಾರ್ಗವ್ ಪಟೇಲ್ ಅವರ ಮೇಲೆ ಹಲ್ಲೆ ಮಾಡಿದ್ದು, ವರ್ಸೋವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರ್ಗವ್ ಪಟೇಲ್ ಅವರ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರ ವಶಕ್ಕೆ ನೀಡಲಾಗಿದೆ.
ಈ ಮೊದಲೇ ಪಂಚೋಲಿ ಅವರು ಇನ್ನಿಬ್ಬರ ವ್ಯಕ್ತಿಗಳೊಡನೆ ಆಗಮಿಸಿ ಪಟೇಲ್ ಅವರ ಮೇಲೆ ಜನವರಿ 15ರಂದು ಹಲ್ಲೆ ನಡೆಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದಿತ್ಯಾ ಪಂಚೋಲಿ ಅವರು ಎರಡನೇ ಬಾರಿಗೆ ಪಟೇಲ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಆದಿತ್ಯಾ ಪಂಚೋಲಿ ಅವರ ಪುತ್ರ ಸೂರಜ್ ಪಂಚೋಲಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಇದರ ಬೆನ್ನಲ್ಲೇ ಆದಿತ್ಯಾ ಅವರು ನೆರೆ ಮನೆಯವರ ಮೇಲೆ ಹಲ್ಲೆ ಮಾಡಿ ವಿವಾದಕ್ಕೀಡಾಗಿದ್ದಾರೆ.