ಇಶ್ರತ್ ಜಾನ್ ಪ್ರಕರಣ: ಸಿಬಿಐ ತನಿಖೆಗೆ ಬಿಜೆಪಿ ಹೆದರ ಬೇಕಿಲ್ಲ
ನವದೆಹಲಿ: ಇಶ್ರತ್ ಜಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸುವ ತನಿಖೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೆದರ ಬೇಕಿಲ್ಲ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ತಪ್ಪು ಮಾಡಿಲ್ಲ ಎಂದಾದರೇ ತನಿಖೆಗೆ ಬಿಜೆಪಿ ಹೆದರಬೇಕಿಲ್ಲ. ಬಿಜೆಪಿ ಸ್ವಚ್ಚವಾಗಿದ್ದರೆ ಯಾವದೇ ತನಿಖೆ ನಡೆಸಿದರೂ ಅವರ ಮೇಲೆ ಅಪವಾದ ಬರುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಭಕ್ತ ಚರಣ್ ಹೇಳಿದ್ದಾರೆ.
ತನಿಖೆ ಮತ್ತು ಸಾಕ್ಷಿಗಳ ಹುಡುಕಾಟ ಕೇವಲ ಕಾರ್ಯವಿಧಾನವಾಗಿದೆ. ಒಬ್ಬ ವ್ಯಕ್ತಿಯನ್ನು ನ್ಯಾಯಾಲಯ ಶಿಕ್ಷಿಸುವವರೆಗೂ ಆ ವ್ಯ.ಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಬಿಜೆಪಿ ನಿರಾಳದಿಂದಿರಬಹುದು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯಾದ 19 ವರ್ಷ ವಯಸ್ಸಿನ ಇಶ್ರತ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ, ಅಮ್ಜದ್ ಪಿಳ್ಳೈ ಮತ್ತು ಝೀಶಾನ್ ಜೊಹಾರ್ ಅವರುಗಳನ್ನು ಗುಜುರಾತ್ ಪೊಲೀಸರು ನಕಲಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಿದ್ದರು.
ಪ್ರಕರಣದ ತನಿಖೆ ನಡೆಸುವಂತೆ ಹೈಕೋರ್ಟ್ ಸಿಬಿಐಗೆ ಆದೇಶಿಸಿತ್ತು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ದೇಶ ಪೂರ್ವಕವಾಗಿಯೇ ಪ್ರಕರಣದಲ್ಲಿ ಸಿಲುಕಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.
ಇದಕ್ಕೆ ಪ್ರತಿಕ್ರಯಿಸಿರುವ ಕಾಂಗ್ರೆಸ್, ಬಿಜೆಪಿಯ ಪಾತ್ರ ಪ್ರಕರಣದಲ್ಲಿ ಇಲ್ಲವಾದರೇ ಸಿಬಿಐ ತನಿಖೆಗೆ ಹೆದರಬೇಕಾಗಿಲ್ಲ ಎಂದು ತಿರುಗೇಟು ನೀಡಿದೆ.