ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉತ್ತರಾಖಂಡದ ಸಾವಿನ ಬಗ್ಗೆ ಕೇಂದ್ರದಿಂದ ತಪ್ಪು ಮಾಹಿತಿ

Mainashree
Updated On : 29 Jun 2013, 3:40 am

ಗಾಜಿಯಾಬಾದ್: ಉತ್ತರಾಖಂಡದ ಪ್ರವಾಹ ಪೀಡಿತಕ್ಕೊಳಗಾಗಿ ಮೃತಪಟ್ಟವರ ಬಗ್ಗೆ ಕೇಂದ್ರ ತಪ್ಪು ಮಾಹಿತಿ ನೀಡುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಪ್ರವಾಹಕ್ಕೆ ಸಿಲುಕಿ ಅನೇಕ ಜನರು ಸಾವನ್ನಪ್ಪಿದ್ದು, ಮೃತದೇಹಗಳ ಎಣಿಕೆ, ಕಾಣೆಯಾದವರ ಸಂಖ್ಯೆಗಳ ಬಗ್ಗೆ ಕೇಂದ್ರ ತಪ್ಪು ಮಾಹಿತಿ ನೀಡಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ನಾನು ಭೇಟಿ ನೀಡಿ ಅಲ್ಲಿನ ಸ್ಥಳಿಯರನ್ನು ವಿಚಾರಿಸಿದಾಗ ಪ್ರವಾಹದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಕೊಚ್ಚಿ ಹೋಗಿದ್ದಾರೆ ಎಂದು ತಿಳಿಸಿದ್ದರು. ಆದರೆ ಸರ್ಕಾರ ಮಾತ್ರ 100ರಿಂದ 150 ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ.

ಯುಪಿಎ ಸರ್ಕಾರ ಉತ್ತರಾಖಂಡದಲ್ಲಿ ನಡೆದ ಘಟನೆಯಲ್ಲಿ ಯಾವುದೇ ರಾಜಕೀಯ ಮಾಡಬಾರದು. ಎಲ್ಲಾ ಪಕ್ಷಗಳು ಒಟ್ಟಾಗಿ ಸಂತ್ರಸ್ತರಿಗೆ ನೆರವಾಗಬೇಕು. ಇದರಲ್ಲಿ ರಾಜಕೀಯ ಬೇಡ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ ಭದ್ರಿನಾಥದಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಬೇಕಾಗಿದೆ. ಮಾದ್ಯಮಗಳ ವರದಿ ಪ್ರಕಾರ 2,000 ಜನರು ಕಾಣೆಯಾಗಿದ್ದಾರೆ. ಈವರೆಗೆ 1,04,687 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement