ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇದಾರನಾಥ ವೈಜ್ಞಾನಿಕವಾಗಿ ಮರು ನಿರ್ಮಾಣ: ಉತ್ತರಾಖಂಡ ಸಿಎಂ

ಉತ್ತರಾಖಂಡದಲ್ಲಿ ಪ್ರವಾಹದಿಂದಾಗಿ ಸಂಪೂರ್ಣ ನೆಲಸಮವಾಗಿರುವ ದೇವರ ನಾಡು ಕೇದಾರನಾಥವನ್ನು..

Lingaraj Badiger
Updated On : 29 Jun 2013, 4:37 am

ನವದೆಹಲಿ: ಉತ್ತರಾಖಂಡದಲ್ಲಿ ಪ್ರವಾಹದಿಂದಾಗಿ ಸಂಪೂರ್ಣ ನೆಲಸಮವಾಗಿರುವ ದೇವರ ನಾಡು ಕೇದಾರನಾಥವನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಮರು ನಿರ್ಮಾಣ ಮಾಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಶನಿವಾರ ಹೇಳಿದ್ದಾರೆ.

ಹೊಸ ದೇವಸ್ಥಾನ-ನಗರಿ ಸಂಪೂರ್ಣ ಭಿನ್ನವಾಗಿರಲಿದೆ ಮತ್ತು ಕೇದಾರನಾಥ ದೇವಸ್ಥಾನದ ಸುತ್ತಮುತ್ತಲಿನ ಮೂಲ ವಸ್ತುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಬಹುಗುಣ ಅವರು ಪ್ರಮುಖ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದೇವಸ್ಥಾನದ ಮರು ನಿರ್ಮಾಣದ ಬಗ್ಗೆ ತಮ್ಮ ಕಾರ್ಯಯೋಜನೆಯನ್ನು ವಿವರಿಸಿದ ಉತ್ತರಾಖಂಡ ಸಿಎಂ, ಮರು ನಿರ್ಮಾಣದ ವೇಳೆ ಪರಿಸರವಾದಿಗಳ ಮತ್ತು ಪುರಾತತ್ವಶಾಸ್ತ್ರಜ್ಞರ ನೆರವು ಪಡೆದು ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಕೇದಾರನಾಥ ಹೆಚ್ಚು ಭೂಕಂಪ ಸಂಭವಿಸುವ ಪ್ರದೇಶವಾಗಿರುವುದರಿಂದ ಭೂಕಂಪ ತಜ್ಞರ ಅಭಿಪ್ರಾಯವನ್ನು ಸಹ ಪಡೆಯಲಾಗುವುದು ಎಂದು ಬಹುಗುಣ ಹೇಳಿದರು.

ಕೇದಾರನಾಥ ದೇವಸ್ಥಾನವನ್ನು ಪುನರ್ ನಿರ್ಮಿಸಲು ಸಿದ್ಧ ಎನ್ನುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೆರವಿನ ಆಹ್ವಾನವನ್ನು ಬಹುಗುಣ ತಿರಸ್ಕರಿಸಿದ್ದಾರೆ. ದೇವಸ್ಥಾನ ಪುನರ್‌ನಿರ್ಮಾಣ ಹಾಗೂ ಮೂಲಸೌಲಭ್ಯ ಜವಾಬ್ದಾರಿ ರಾಜ್ಯ ಸರ್ಕಾರವೇ ನಿಭಾಯಿಸಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement