ಮಲೆಗಾಂವ್ ಸ್ಪೋಟ ಪ್ರಕರಣದ ಪೂರಕ ತನಿಖೆ ಅನೈತಿಕೆ
ಮುಂಬೈ: 2006ರಲ್ಲಿ ನಡೆದ ಮಲೆಗಾಂವ್ ಸ್ಫೋಟ ಪ್ರಕರಣದ ಪೂರಕ ತನಿಖೆ ಅನೈತಿಕವಾಗಿದೆ ಎಂದು ಪ್ರಕರಣದ ಆರೋಪಿ ಧನ್ ಸಿಂಗ್ ಶನಿವಾರ ಹೇಳಿದ್ದಾನೆ.
ರಾಷ್ಟ್ರೀಯ ತನಿಖಾ ತಂಡ ನಡೆಸಿರುವ ಮಲೆಗಾಂವ್ ಸ್ಫೋಟ ಪ್ರಕರಣದ ಪೂರಕ ತನಿಖೆ ಅನೈತಿಕವಾಗಿದೆ. ಇದು ಕಾನೂನನ್ನು ಒಳಗೊಂಡಿಲ್ಲ. ತನಿಖಾ ತಂಡ ಊಹಿಸಿ ತನಿಖೆ ನಡೆಸಿದ್ದು, ಸಂಗ್ರಹಿಸಿರುವಂತಹ ಸಾಕ್ಷಿಗಳು ತಪ್ಪಾಗಿವೆ. ಅದು ಕಾನೂನಿಗೆ ಒಳಪಡುವುದಿಲ್ಲ ಎಂದು ಹೇಳುವುದರ ಮೂಲಕ ಕಾನೂನಿಗೆ ಸವಾಲು ಹಾಕಿದ್ದಾನೆ.
ಈ ಸಂಬಂಧ ಆರೋಪಿ, ಪ್ರಕರಣದ ಪೂರಕ ತನಿಖೆ ಅನೈತಿಕ ಎಂದು ಎಟಿಎಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ನನ್ನ ಹೇಳಿಕೆ ಸಮಂಜಸ ಎನ್ನಿಸದಿದ್ದಲ್ಲಿ, ಈ ಅರ್ಜಿಯನ್ನು ಮುಂಬೈ ನ್ಯಾಯಾಲಯಕ್ಕೆ ಕಳುಹಿಸಿಕೊಡಬೇಕು. ಇದರ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಆರೋಪಿ ಹೇಳಿದ್ದಾನೆ.
2006ರಲ್ಲಿ ಮಲೆಗಾಂವ್ನ ಮಸೀದಿ ಸಮೀಪದಲ್ಲಿರುವ ಬಡಾ ಕಬರ್ಸ್ಥಾನ್, ಮುಶೈರಾ ಚೌಕದಲ್ಲಿರುವ ಬೀಫ್ ಮಾರುಕಟ್ಟೆ ಮತ್ತು ಆಯೇಷಾ ನಗರದಲ್ಲಿ ಮೂರು ಬಾಂಬ್ಗಳು ಸ್ಫೋಟಗೊಂಡು ನೂರಾರು ಮಂದಿ ಸಾವನ್ನಪ್ಪಿದ್ದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು 2007ರಲ್ಲಿ ಆರೋಪಿ ಧನ್ಸಿಂಗ್ ಅವರನ್ನು ಬಂಧಿಸಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಇತ್ತೀಚೆಗಷ್ಟೆ ಪ್ರಕರಣದ ಪೂರಕ ತನಿಖೆ ನಡೆಸಿದ ಸಿಬಿಐ ಆರೋಪಿ ವಿರುದ್ಧ ಮೋಖಾ ಅಡಿ ಪ್ರಕರಣ ದಾಖಲಿಸಲಾಗಿತ್ತು. ಮೋಖಾ ನ್ಯಾಯಾಲಯ ಪ್ರಕರಣವನ್ನು ಎಟಿಎಸ್ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.