ಸ್ಫಾಟ್ ಫಿಕ್ಸಿಂಗ್: ಕುಂದ್ರಾ ಪ್ರಕರಣದಿಂದ ಜಾರಿಕೊಂಡ ದೆಹಲಿ ಪೊಲೀಸ್
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಫಾಟ್ ಫಿಕ್ಸಿಂಗ್ ಪ್ರಕರಣದ ಬೆಟ್ಟಿಂಗ್ ಆರೋಪಿ, ರಾಜಸ್ಥಾನ ರಾಯಲ್ಸ್ನ ಮಾಲಿಕರಾದ ರಾಜ್ ಕುಂದ್ರಾ ಅವರನ್ನು ಜೈಪುರ ಪೊಲೀಸರು ವಿಚಾರಣೆಗೊಳಪಡಿಸಬೇಕು ಎಂದು ದೆಹಲಿ ಪೊಲೀಸರು ಶನಿವಾರ ಹೇಳಿದ್ದಾರೆ.
ಇಂದು ಜೈಪುರ ಪೊಲೀಸರಿಗೆ ಪತ್ರ ಬರೆದಿರುವ ದೆಹಲಿ ಪೊಲೀಸರು, ಐಪಿಎಲ್ ಬೆಟ್ಟಿಂಗ್ ಆರೋಪಿ ರಾಜಕುಂದ್ರಾ ಅವರ ವಿರುದ್ಧ ಕ್ರಮಕೈಗೊಳ್ಳಿ. ರಾಜ್ಕುಂದ್ರಾ ಅವರು ಜೈಪುರದಲ್ಲಿ ಬೆಟ್ಟಿಂಗ್ ಕಟ್ಟಿದ್ದರಿಂದ ಪ್ರಕರಣದ ವಿಚಾರಣೆಯನ್ನು ಜೈಪುರ ಪೊಲೀಸರೇ ನಡೆಸಬೇಕು ಎಂದು ತಿಳಿಸಿದ್ದಾರೆ.
ಜೈಪುರ ಪೊಲೀಸರಿಗೆ ಕುಂದ್ರಾ ವಿಚಾರಣೆ ನಡೆಸಿ ಎಂದು ಹೇಳಿರುವ ದೆಹಲಿ ಪೊಲೀಸ್ ಪ್ರಕರಣದಿಂದ ನುಣುಚಿಕೊಳ್ಳುವ ಹುನ್ನಾರ ನಡೆಸಿದೆ.
ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದ ಹಿನ್ನಲೆಯಲ್ಲಿ ಕ್ರಿಕೆಟ್ ಆಟಗಾರರಾದ ಎಸ್. ಶ್ರೀಶಾಂತ್, ಚಂಡೀಲಾ ಮತ್ತು ಅಂಕೀತ್ ಚವಣ್ ಸೇರಿದಂತೆ ಬುಕ್ಕಿಗಳನ್ನು ಬಂಧಿಸಿದ ನಂತರ, ಪ್ರಕರಣದಲ್ಲಿ ಕುಂದ್ರಾ ಅವರ ಹೆಸರು ಕೇಳಿ ಬಂದಿತ್ತು.