3 ತಿಂಗಳ ಮಗುವನ್ನು ಸಜೀವವಾಗಿ ಹೂಳಲೆತ್ನಿಸಿದ ಅಮ್ಮ!
ಇಲ್ಲಿನ ಕರ್ನಾಲ್ ಜಿಲ್ಲೆಯಲ್ಲಿ 30ರ ಹರೆಯದ ಮಹಿಳೆಯೊಬ್ಬರು ತನ್ನ 3 ತಿಂಗಳ ಮಗುವನ್ನು ಸಜೀವವಾಗಿ ಹೂಳಲೆತ್ನಿಸಿದ ಘಟನೆ...
ಚಂಢೀಗಢ: ಇಲ್ಲಿನ ಕರ್ನಾಲ್ ಜಿಲ್ಲೆಯಲ್ಲಿ 30ರ ಹರೆಯದ ಮಹಿಳೆಯೊಬ್ಬರು ತನ್ನ 3 ತಿಂಗಳ ಮಗುವನ್ನು ಸಜೀವವಾಗಿ ಹೂಳಲೆತ್ನಿಸಿದ ಘಟನೆಯೊಂದು ವರದಿಯಾಗಿದೆ .
ಮೂರು ಹೆಣ್ಮಕ್ಕಳು ಹಾಗು ಓರ್ವ ಗಂಡು ಮಗುವಿನ ತಾಯಿಯಾಗಿರುವ ಅಜ್ಮೇರಿ ಖತುನ್ ಎಂಬ ಮಹಿಳೆ ಮತ್ತೊಂದು ಹೆಣ್ಣು ಮಗು ಹುಟ್ಟಿದ್ದಕ್ಕಾಗಿ ಆ ಮಗುವನ್ನು ಹೂಳಲೆತ್ನಿಸಿದ್ದರು.
ತನ್ನ ಕೋಣೆಯಲ್ಲಿಯೇ ಹೊಂಡವೊಂದನ್ನು ಅಗೆದು, ಅದರಲ್ಲಿ ತನ್ನ ಹೆಣ್ಣುಮಗುವನ್ನು ಹೂತು ಹಾಕಿದ ತಕ್ಷಣ ಸಂಬಂಧಿಕರಿಗೆಈ ವಿಷಯ ಗೊತ್ತಾಗಿ ಮಗುವನ್ನು ರಕ್ಷಿಸಲಾಗಿದೆ.
ಅಜ್ಮೇರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಈಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.