ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಶ್ರತ್ ಪ್ರಕರಣ: ಪಾಂಡೆ ಅರ್ಜಿ ತಿರಸ್ಕೃತ

ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸೋಮವಾರ ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಪಿ. ಪಿ...

Rashmi Kasaragodu
Updated On : 1 Jul 2013, 5:20 am

ಅಹ್ಮದಾಬಾದ್: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸೋಮವಾರ ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಪಿ. ಪಿ. ಪಾಂಡೆ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ಪಾಂಡೆ ಅವರ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, 2004ರಲ್ಲಿ ಇಶ್ರತ್ ಮತ್ತು ಮೂವರನ್ನು ಹತ್ಯೆಗೈದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಪಾಂಡೆ ತಲೆಮರೆಸಿಕೊಂಡ ವ್ಯಕ್ತಿ ಎಂದು ಹೇಳಿದೆ.

ಈ ಹಿಂದೆ ವಿಶೇಷ ಸಿಬಿಐ ಕೋರ್ಟ್‌ನ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಹೆಚ್ ಎಸ್ ಖುತ್‌ವಾಡ್ ಅವರು ಪಿ.ಪಿ. ಪಾಂಡೆ ಅವರನ್ನು ತಲೆಮರೆಸಿಕೊಂಡ ವ್ಯಕ್ತಿ ಎಂದು ಹೇಳಿದ್ದು ಅಪರಾಧಿ ಪ್ರಕ್ರಿಯೆ ಸಂಹಿತೆಯ 83 ವಿಭಾಗದಡಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದರು.

ಏತನ್ಮಧ್ಯೆ ಜುಲೈ 31ಕ್ಕೆ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಪಾಂಡೆ ಅವರಿಗೆ ಆದೇಶಿಸಲಾಗಿದೆ.

1982 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಪೃಥ್ವಿಪಾಲ್ ಪಿ. ಪಾಂಡೆ ಅವರು ಇಶ್ರತ್ ನಕಲಿ ಎನ್‌ಕೌಂಟರ್‌ನ ಆರೋಪಿಯಾಗಿದ್ದಾರೆ. 2004 ಜೂನ್ 15ರಂದು ಅಹ್ಮದಾಬಾದ್ ಹೊರವಲಯದಲ್ಲಿ ಇಶ್ರತ್ ಜಂಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ, ಅಮ್ಜದಲಿ ಅಕ್ಬರಲಿ ರಾಣಾ ಮತ್ತು ಜೀಶನ್ ಜೋಹರ್ ಎಂಬವರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು. ಈ ಘಟನೆಯ ವೇಳೆ ಪಾಂಡೆ ಅವರು ಜಂಟಿ ಪೊಲೀಸ್ ಆಯುಕ್ತರಾಗಿ ಕಾರ್ಯವೆಸಗುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement