ಡೀಸೆಲ್ ದರ 50 ಪೈಸೆ ಏರಿಕೆ
ಇಂದು ಮಧ್ಯರಾತ್ರಿಯಿಂದ ಡೀಸಲ್ ದರ 50 ಪೈಸೆ ಏರಿಕೆಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪರೇಷನ್ ಹೇಳಿದೆ.
ನವದೆಹಲಿ: ಇಂದು ಮಧ್ಯರಾತ್ರಿಯಿಂದ ಡೀಸಲ್ ದರ 50 ಪೈಸೆ ಏರಿಕೆಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪರೇಷನ್ ಹೇಳಿದೆ.
ಪ್ರಸ್ತುತ ವರ್ಷದಲ್ಲಿ 6 ನೇ ಬಾರಿ ಡೀಸೆಲ್ ದರ ಏರಿಕೆ ಕಂಡಿದೆ.
ಇಂದು ಮಧ್ಯರಾತ್ರಿಯಿಂದ ಲೀಟರ್ ಡೀಸೆಲ್ ದರ 50. 84 ಪೈಸೆ ಆಗಲಿದೆ. ಈ ಹಿಂದೆ ಡೀಸೆಲ್ ದರ 50.26 ಪೈಸೆ ಆಗಿತ್ತು.
ಕಳೆದ ಜೂನ್ ತಿಂಗಳಲ್ಲಿ ಡೀಸೆಲ್ ಬೆಲೆ ಏರಿಕೆ ಮಾಡಲಾಗಿದ್ದರೂ, ಒಂದು ತಿಂಗಳಾದ ಮೇಲೆ ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡಲಾಗಿದೆ.