ನಟಿ ಜಿಯಾಖಾನ್ ಆತ್ಮಹತ್ಯೆ: ಸೂರಜ್ ಪಾಂಚೋಲಿಗೆ ಜಾಮೀನು
ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ, ಆಕೆಯ ಪ್ರಿಯಕರ ಸೂರಜ್..
ಮುಂಬೈ: ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ, ಆಕೆಯ ಪ್ರಿಯಕರ ಸೂರಜ್ ಪಾಂಚೋಲಿಗೆ ಸೋಮವಾರ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸೂರಜ್ ಪಾಂಜೋಲಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, 50 ಸಾವಿರ ರುಪಾಯಿ ಬಾಂಡ್ ಮೇಲೆ ಜಾಮೀನು ನೀಡಿದೆ. ಅಲ್ಲದೆ ವಿದೇಶಕ್ಕೆ ತೆರಳದಂತೆ ಸೂಚಿಸಿರುವ ಕೋರ್ಟ್, ಪಾಸ್ಪೋರ್ಟ್ ಒಪ್ಪಿಸಲು ಸೂರಜ್ಗೆ ಸೂಚಿಸಿದೆ.
ಈ ಮುಂಚೆ ಸ್ಥಳೀಯ ಕೋರ್ಟ್ ಸೂರಜ್ ಪಾಂಚೋಲಿಗೆ ಜಾಮೀನು ನಿರಾಕರಿಸಿತ್ತು, ಹೀಗಾಗಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆತ್ಮಹತ್ಯೆಗೂ ಮುನ್ನ ಜಿಯಾಖಾನ್ ಬರೆದಿದ್ದ ಡೆತ್ನೋಟ್ ಪತ್ತೆಯಾದ ನಂತರ ಸೂರಜ್ ಪಾಂಚೋಲಿಯನ್ನು ಬಂಧಿಸಬೇಕು ಎಂದು ಜಿಯಾ ಪೋಷಕರು ಪೊಲೀಸರು ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಜೂನ್ 10ರಂದು ಪೊಲೀಸರು ಸೂರಜ್ನನ್ನು ಬಂಧಿಸಿದ್ದರು.