ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ವಿರುದ್ಧ ಚಿದು ಟೀಕಾಪ್ರಹಾರ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಡಕುಂಟು ಮಾಡುವ ವ್ಯಕ್ತಿ ಎಂದು ವಿತ್ತ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ವಿರುದ್ಧ ...

Rashmi Kasaragodu
Updated On : 1 Jul 2013, 7:35 am

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಡಕುಂಟು ಮಾಡುವ ವ್ಯಕ್ತಿ ಎಂದು ವಿತ್ತ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಅದೇ ವೇಳೆ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಚಿದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಯುನಿಫಾರ್ಮ್ ಸಿವಿಲ್ ಕೋಡ್, ಅಯೋಧ್ಯಾ ಮತ್ತು ಪರಿಚ್ಛೇದ 370ರ ರದ್ದುಗೊಳಿಸುವಿಕೆಯ ಬಗ್ಗೆ ಬಿಜೆಪಿ ವಿಭಾಗೀಯ ನಿಲುವು ಕೈಗೊಂಡಿದ್ದಕ್ಕೆ ದೇಶದ ಜನರು ಮುಂದಿನ ಚುನಾವಣೆಯಲ್ಲಿ ಉತ್ತರಿಸುತ್ತಾರೆ ಎಂದು ಚಿದು ಹೇಳಿದ್ದಾರೆ.

ಆದಾಗ್ಯೂ, ಮೋದಿ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿರುವುದರಿಂದ ಕಾಂಗ್ರೆಸ್‌ಗೆ ಲಾಭವಿದೆಯೇ? ಎಂಬ ಪ್ರಶ್ನೆ ಕೇಳಿದಾಗ ತಮ್ಮ ಪಕ್ಷ ವೈಯಕ್ತಿಕವಾಗಿ ಯಾರೊಂದಿಗೂ ಸೆಣಸಾಡುವುದಿಲ್ಲ, ನಮ್ಮದೇನಿದ್ದರೂ ಪಕ್ಷದ ಜತೆಗೆ ಎಂದು ಚಿದು ಉತ್ತರಿಸಿದ್ದಾರೆ.

ಮೋದಿ ನೇತೃತ್ವದ ಬಗ್ಗೆ ಕಿಡಿ ಕಾರಿದ ಚಿದು, ಮೋದಿ ಒಡಕುಂಟು ಮಾಡುವ ವ್ಯಕ್ತಿಯಾಗಿದ್ದು, ಅವರ ಪಕ್ಷದಲ್ಲೇ ವೈಮನಸ್ಸು ಇದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement