ಇಬ್ಬರು ಪೊಲೀಸರನ್ನು ಕೊಂದ ಉಗ್ರರು
ಶ್ರೀನಗರ: ಉಗ್ರರು ಇಬ್ಬರು ಪೊಲೀರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಕಾಶ್ಮೀರದ ಉತ್ತರ ದಿಕ್ಕಿನಲ್ಲಿರುವ ಕುಪ್ವಾರ ಎಂಬಲ್ಲಿ ನಡೆದಿದೆ.
ಭಾರತದ ಮೀಸಲು ಪಡೆಯ ಪೇದಗಳಾದ ಸಂತೋಷ್ ಕುಮಾರ್ ಮತ್ತು ಆಝಾದ್ ಚಂದ್ ಮೃತಪಟ್ಟವರು. ಶ್ರೀನಗರದಿಂದ 75ಕಿ.ಮೀ ದೂರದಲ್ಲಿರುವ ಹ್ಯಾಂದ್ವಾರ ಟೌನಿಂದ ಪೊಲೀಸರ ಮೇಲೆ ಗುರಿಯಿಕ್ಕಿ ಗುಂಡುಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.