ನಿತ್ಯಾ ವಿರುದ್ಧ ಮತ್ತೊಂದು ಕೇಸ್ ದಾಖಲು
ನಿತ್ಯಾನಂದ ಸ್ವಾಮಿ ವಿರುದ್ಧ ಅಮೆರಿಕದ ಕೋರ್ಟ್ನಲ್ಲಿ ಶನಿವಾರ ಮತ್ತೊಂದು ಕೇಸ್ ದಾಖಲಾಗಿದೆ..
ಕ್ಯಾಲಿಫೋರ್ನಿಯಾ: ನಿತ್ಯಾನಂದ ಸ್ವಾಮಿ ವಿರುದ್ಧ ಅಮೆರಿಕದ ಕೋರ್ಟ್ನಲ್ಲಿ ಶನಿವಾರ ಮತ್ತೊಂದು ಕೇಸ್ ದಾಖಲಾಗಿದೆ.
ನಿತ್ಯಾನಂದನ ವಿರುದ್ಧ ಡಾ. ಮನೋಹರ್ ಶಿಂಧೆ ಹಾಗೂ ಇತರ ಮಾಜಿ ಭಕ್ತರು ಕ್ಯಾಲಿಫೋರ್ನಿಯಾ ಕೋರ್ಟ್ನಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ನಿತ್ಯಾನಂದ ತಮ್ಮಿಂದ ಮೋಸದಿಂದ 8 ಲಕ್ಷ ಡಾಲರ್ ಹಣವನ್ನು ದೇಣಿಗೆಯಾಗಿ ಪಡೆದಿದ್ದು, ಆ ಹಣವನ್ನು ವಾಪಸ್ ನೀಡುವಂತೆ ನಿತ್ಯಾನ ಮಾಜಿ ಭಕ್ತರು ಕೋರ್ಟ್ ಮೊರೆ ಹೋಗಿದ್ದಾರೆ.