ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ; 5 ಸಾವು
ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಣ್ಯನ್ಕುರಿಸ್ಸಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕ ಬೆಂಕಿಗಾಹುತಿಯಾಗಿದ್ದು, 5 ಮಂದಿ...
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಣ್ಯನ್ಕುರಿಸ್ಸಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕ ಬೆಂಕಿಗಾಹುತಿಯಾಗಿದ್ದು, 5 ಮಂದಿ ಸಾವನ್ನಪಿರುವ ಬಗ್ಗೆ ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಏಳು ಮಂದಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಸಾವನ್ನಪ್ಪಿರುವ ಮಂದಿ ಅದೇ ಪಟಾಕಿ ತಯಾರಿಕಾ ಘಟಕದ ನೌಕರರಾಗಿದ್ದಾರೆ.
ದೇವಾಲಯದಲ್ಲಿನ ಉತ್ಸವಗಳಿಗಾಗಿ ಪ್ರಸ್ತುತ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ತಯಾರಿಕೆ ಜೋರಾಗಿ ನಡೆದು ಬರುತ್ತಿತ್ತು.
ಪಟಾಕಿ ತಯಾರಿಕಾ ಘಟಕದಲ್ಲಿ ಅಚಾನಕ್ ಭಾರೀ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಲ್ಲಿಗೆ ಓಡಿ ಬಂದಿದ್ದು, ಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದಾರೆ.
ಪೊಲೀಸ್ ಮತ್ತು ಗ್ರಾಮಸ್ಥರ ಸಹಾಯದಿಂದ ಅಗ್ನಿಶಾಮಕ ದಳದವರು ರಕ್ಷಣಾಕಾರ್ಯಗಳನ್ನು ಮಾಡಿದ್ದು, ಎರಡು ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ.