ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಂಗ್ಲಾ - ಭಾರತ ಗಡಿಭಾಗದಲ್ಲಿ ಭೂಕಂಪ

ಬಾಂಗ್ಲಾದೇಶ ಮತ್ತು ಭಾರತದ ಆಗ್ನೇಯ ದಿಕ್ಕಿನಲ್ಲಿ ಶನಿವಾರ 5.2 ತೀವ್ರತೆಯ ಭೂಕಂಪ ಸಂಭವಿಸಿದೆ.

Mainashree
Updated On : 2 Mar 2013, 3:37 am

ಶಿಲ್ಲಾಂಗ್: ಬಾಂಗ್ಲಾದೇಶ ಮತ್ತು ಭಾರತದ ಆಗ್ನೇಯ ದಿಕ್ಕಿನಲ್ಲಿ ಶನಿವಾರ ಭೂಕಂಪ ಸಂಭವಿಸಿದೆ.

ಇಂದು ಬೆಳಿಗ್ಗೆ 7ಗಂಟೆಗೆ 5.2 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ಭಾರತ -ಬಾಂಗ್ಲದೇಶದ ಗಡಿಭಾಗ ಮತ್ತು ಪಶ್ಚಿಮ ಭಾಗದಲ್ಲಿರುವ ತ್ರಿಪುರದಲ್ಲಿ ಭೂಕಂಪ ಉಂಟಾಗಿದ್ದು, 4ರಿಂದ 5 ಸೆಕೆಂಡ್ ಕಂಪಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಆಗ್ನೇಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿಜೋರಮ್, ತ್ರಿಪುರ, ನಾಗಲ್ಯಾಂಡ್, ಅರಣಾಚಲ್ ಪ್ರದೇಶ ಮತ್ತು ಮಣಿಪುರವನ್ನು ವಿಶ್ವದಲ್ಲೇ 6ನೇ ಭೂಕಂಪಕ್ಕೆ ಗುರಿಯಾಗುವ ಪ್ರದೇಶಗಳಾಗಿವೆ ಎಂದು ತಿಳಿದು ಬಂದಿದೆ.

1897ರಲ್ಲಿ ಈ ವಲಯಗಳಲ್ಲಿ 8.7ರ ತೀವ್ರತೆಯಲ್ಲಿ ಭೂಕಂಪ ಉಂಟಾಗಿ 1,600ಜನರನ್ನು ಬಲಿತೆಗೆದುಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement