ಪೊಸ್ಕೋ ವಿರುದ್ಧ ಪ್ರತಿಭಟನೆ; ಬಾಂಬ್ ಸ್ಫೋಟದಲ್ಲಿ 3 ಪ್ರತಿಭಟನಾಕಾರರು ಸಾವು
ಒಡಿಶಾದಲ್ಲಿ ದಕ್ಷಿಣ ಕೊರಿಯಾದ ಪೊಸ್ಕೋ ಕಂಪನಿ 12 ಬಿಲಿಯನ್ ಡಾಲರ್ ಮೊತ್ತದ ಸ್ಟ್ರೀಲ್ ಪ್ರಾಜೆಕ್ಟ್ ಆರಂಭಿಸಲು ಸಿದ್ಧತೆ ನಡೆಸಿದ್ದು...
ಒಡಿಶಾ: ಒಡಿಶಾದಲ್ಲಿ ದಕ್ಷಿಣ ಕೊರಿಯಾದ ಪೊಸ್ಕೋ ಕಂಪನಿ 12 ಬಿಲಿಯನ್ ಡಾಲರ್ ಮೊತ್ತದ ಸ್ಟ್ರೀಲ್ ಪ್ರಾಜೆಕ್ಟ್ ಆರಂಭಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ರಾಜ್ಯದ ಜನರಿಂದ ಬಾರೀ ವಿರೋಧ ವ್ಯಕ್ತವಾಗಿದೆ.
ಪೊಸ್ಕೋ ಕಂಪನಿಯ ವಿರುದ್ಧ ಒಡಿಶಾ ಜನರು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಮೂವರು ಪ್ರತಿಭಟನಾಕಾರರು ಶನಿವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪಾಟ್ನಾದ ಗ್ರಾಮವೊಂದರಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದ್ದು, ಬಾಂಬ್ ತಯಾರಿಸುತ್ತಿದ್ದ ಜನರೇ ಸ್ಫೋಟಕ್ಕೊಳಗಾಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪೊಸ್ಕೋ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಗಳೇ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾಗಿರುವುದಾಗಿ ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ.
ಮುಗ್ಧ ಗ್ರಾಮಸ್ಥರನ್ನು ಬಲಿ ತೆಗೆದುಕೊಂಡಿರುವ ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಅದೇ ವೇಳೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ನಾವು ಬಯಸುತ್ತೇವೆ ಎಂದು ಪೊಸ್ಕೋ ಪ್ರತಿರೋಧ್ ಸಂಗ್ರಾಮ್ ಸಮಿತಿಯ ವಕ್ತಾರ ಪ್ರಶಾಂತ್ ಪೈಕರಿ ಒತ್ತಾಯಿಸಿದ್ದಾರೆ.
ಈ ಸ್ಫೋಟದಲ್ಲಿ ಪ್ರತಿಭಟನಾಕಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.