ಯುಪಿಎ ಆಡಳಿತ ದುರ್ಬಲ: ಮೋದಿ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಎರಡು ದಿನಗಳ ಭಾರತೀಯ ಜನತಾತ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಯುಪಿಎ ಸರ್ಕಾರ, ಅಭಿವೃದ್ಧಿ ಹೆಸರಲ್ಲಿ ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಲೆ ಏರಿಕೆಯಲ್ಲಿ ಜನ ತತ್ತರಿಸುತ್ತಿದ್ದರೂ ಇದರ ಬಗ್ಗೆ ಕೇಂದ್ರ ಸರ್ಕಾರ ಲಕ್ಷ್ಯ ಕೊಡದಿರುವುದು ವಿಷಾಧನೀಯ ಸಂಗತಿ ಎಂದು ಅವರು ಹೇಳಿದ್ದಾರೆ.
ಯುಪಿಎ ಆಡಳಿತವನ್ನು ಹೀಗೆ ಮುಂದುವರೆಸಿದರೆ ಜನರು ಪರದಾಡುವಂತಹ ಸ್ಥಿತಿ ಎದುರಾಗಲಿದೆ. ಕಾಂಗ್ರೆಸ್ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಾ ಜನರ ಅಭಿಪ್ರಾಯಗಳನ್ನು ಕಡೆಗಣಿಸುತ್ತಾ ಬಂದಿದೆ ಎಂದು ಅವರು ದೂರಿದ್ದಾರೆ.
ಇದಲ್ಲದೇ ನೆಹರು ಕುಟುಂಬದತ್ತಾ ಬೊಟ್ಟು ಮಾಡಿದ ಮೋದಿ, ನೆಹರು ಕುಟುಂಬ ಸರ್ವಾಡಳಿತ ನಡೆಸುತ್ತಿದ್ದು, ಮನಮೋಹನ್ ಸಿಂಗ್ ಎಂಬ ರಾತ್ರಿ ಕಾವಲುಗಾರರನ್ನು ನೇಮಿಸಿದ್ದಾರೆ ಎಂದು ಟೀಕಿಸಿದ್ದಾರೆ.