ಪೂಜಾರ್ ದ್ವಿಶತಕ, ನಡೆಯಲಿಲ್ಲ ದೇವರ ಆಟ
ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್‌ನ ಮೂರನೇ ದಿನವಾದ ಸೋಮವಾರ ಕಾಂಗರುಗಳ ವಿರುದ್ಧ ಚೇತೇಶ್ವರ್ ಪೂಜಾರ್ ಅವರು ಭರ್ಜರಿ...
ಹೈದರಾಬಾದ್: ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್‌ನ ಮೂರನೇ ದಿನವಾದ ಸೋಮವಾರ ಕಾಂಗರುಗಳ ವಿರುದ್ಧ ಚೇತೇಶ್ವರ್ ಪೂಜಾರ್ ಅವರು ಭರ್ಜರಿ ದ್ವಿಶತಕ(204) ಬಾರಿಸಿದ್ದಾರೆ.
ಚೇತೇಶ್ವರ್ ಹಾಗೂ ಮುರಳಿ ವಿಜಯ್ ಅವರ ಭರ್ಜರಿ ಜೊತೆಯಾಟ ಕಂಡ ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ 460 ರನ್‌ಗಳಿಸಿದೆ. ಚೇತೇಶ್ವರ್ ಅವರ ನಂತರ ಬಂದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಕೇವಲ 7 ರನ್ ಗಳಿಸಿ ಔಟಾದರು.
ಭಾರತ ನಿನ್ನೆ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ದಿನಾಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 311ರನ್ ಪೇರಿಸಿತ್ತು. ಆರಂಭಿಕ ಮುರಳಿ ವಿಜಯ್ ಹಾಗೂ ಮೂರನೇ ಕ್ರಮಾಂಕದ ಚೇತೇಶ್ವರ್ ಪೂಜಾರ್ ಇಬ್ಬರೂ 294ರನ್‌ಗಳ ಜೊತೆಯಾಟವಾಡಿದ್ದರು. ಇಂದು ಮತ್ತೆ ಆಟ ಮುಂದೂವರೆಸಿದ ಈ ಇಬ್ಬರೂ 345 ರನ್‌ಗಳ ಜೊತೆಯಾಟ ದಾಖಲಿಸಿದರು. ಪೂಜಾರ್ 341 ಎಸೆತದಲ್ಲಿ 204ರನ್ ಸಿಡಿಸಿ, ಪ್ಯಾಟಿನ್‌ಸನ್‌ಗೆ ವಿಕೆಟ್ ಒಪ್ಪಿಸಿದರು. ಇದಕ್ಕು ಮುನ್ನ ಮುರಳಿ ವಿಜಯ್ ಅವರು ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಕೋವನ್‌ಗೆ ಕ್ಯಾಚಿತ್ತು ಔಟಾದರು.