2ನೇ ಟೆಸ್ಟ್: ಆಸಿಸ್ ವಿರುದ್ಧ ಗೆಲುವು ನಮ್ಮದೇ
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಭಾರತ ಇನಿಂಗ್ಸ್ ಹಾಗೂ 135ರನ್ಗಳ ಭರ್ಜರಿ ಗೆಲವು ಸಾಧಿಸಿದೆ. ಮಂಗಳವಾರ ಬ್ಲೂ ಬಾಯ್ಸ್..
ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಭಾರತ ಇನಿಂಗ್ಸ್ ಹಾಗೂ 135ರನ್ ಗಳ ಭರ್ಜರಿ ಗೆಲವು ಸಾಧಿಸಿದೆ. ಮಂಗಳವಾರ ಬ್ಲೂ ಬಾಯ್ಸ್ ಸ್ಪಿನ್ ಬೌಲಿಂಗ್ ಗೆ ಪರದಾಡಿದ ಆಸಿಸ್ ಎರಡನೇ ಇನಿಂಗ್ಸ್ ನಲ್ಲಿ 131ಕ್ಕೆ ಆಲೌಟ್ ಆಗಿದೆ.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲೂ ಭರ್ಜರಿ ಜಯ ಗಳಿಸಿದ್ದ ಭಾರತ ಇದೀಗ ಎರಡನೇ ಟೆಸ್ಟ್ ನಲ್ಲೂ ಗೆಲ್ಲುವ ಮೂಲಕ ನಾಲ್ಕು ಸರಣಿಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ 2-0 ಅಂತರದ ಮುನ್ನಡೆ ಸಾಧಿಸಿದೆ. ಭರ್ಜರಿ ದ್ವಿಸತಕ ಬಾರಿಸಿದ ಚೇತೇಶ್ವರ ಪೂಜಾರ ಅವರು ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಕೋವನ್ ಅವರು 44ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಭಾರತ ಪರ ಆರ್.ಅಶ್ವಿನ್ ಅವರು ಮತ್ತೊಮ್ಮೆ ಮಿಂಚಿ 63ರನ್ ನೀಡಿ 5 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜ 3, ಇಶಾಂತ್ ಶರ್ಮ 1 ವಿಕೆಟ್ ಪಡೆದರು.
ನಿನ್ನೆ ಆಸಿಸ್ ವಿರುದ್ಧದ ಎರಡನೇ ಟೆಸ್ಟ್ ನ ಮೊದಲ ಇನಿಂಗ್ ನಲ್ಲಿ ಭಾರತ ಚೇತೇಶ್ವರ ಪೂಜಾರ ಅವರ ದ್ವಿಶತಕದ ನೆರವಿನಿಂದಾಗಿ 503ರನ್ ಗಳ ದೊಡ್ಡ ಮೊತ್ತವನ್ನು ಪೇರಿಸಿತ್ತು. 266ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಆಸ್ಟ್ರೇಲಿಯಾ ಸೋಮವಾರ ದಿನಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 74ರನ್ ಗಳಿಸಿತ್ತು. ಇಂದು ಮತ್ತೆ ಇನಿಂಗ್ಸ್ ಆರಂಭಿಸಿದ ಕಾಂಗೂರು ಪಡೆ 131ಕ್ಕೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು.