ಮಾಲ್ಡಿವ್ಸ್ ಮಾಜಿ ಅಧ್ಯಕ್ಷ ನಶೀದ್ ಬಂಧನ
ತನ್ನ ಆಡಳಿತಾವಧಿಯಲ್ಲಿ ಕಾನೂನು ಬಾಹಿರವಾಗಿ ಉನ್ನತ ನ್ಯಾಯಾಧೀಶ ಅಬ್ದುಲ್ಲಾ ಮೋಹ್ಮದ್ ಅವರ ಬಂಧನಕ್ಕೆ ಆದೇಶ ನೀಡಿದ್ದ ಪ್ರಕರಣ ಸಂಬಂಧ...
ಮಾಲೆ: ತನ್ನ ಆಡಳಿತಾವಧಿಯಲ್ಲಿ ಕಾನೂನು ಬಾಹಿರವಾಗಿ ಉನ್ನತ ನ್ಯಾಯಾಧೀಶ ಅಬ್ದುಲ್ಲಾ ಮೋಹ್ಮದ್ ಅವರ ಬಂಧನಕ್ಕೆ ಆದೇಶ ನೀಡಿದ್ದ ಪ್ರಕರಣ ಸಂಬಂಧ ಮಾಲ್ಡಿವ್ಸ್ ಮಾಜಿ ಅಧ್ಯಕ್ಷ ಮೋಹಮ್ಮದ್ ನಶೀದ್ ಅವರನ್ನು ಮಂಗಳವಾರ ಮಾಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಾನೂನು ಬಾಹಿರವಾಗಿ ನ್ಯಾಯಾಧೀಶರ ಬಂಧನಕ್ಕೆ ಆದೇಶಿಸಿದ್ದರಿಂದ ನಶೀದ್ ಅವರಿಗೆ ಮಾಲೆ ಕೋರ್ಟ್ 3 ಬಾರಿ ಬಂಧನದ ವಾರೆಂಟ್ ಜಾರಿಮಾಡಿತ್ತು. ನಶಿದ್ ಬಂಧನದಿಂದ ತಪ್ಪಿಸಿಕೊಳ್ಳಲು ಮಾಲ್ಡಿವ್ಸ್ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅವಿತುಕೊಂಡಿದ್ದರು.
ಕೋರ್ಟ್ನ ಬಂಧನದ ಆದೇಶದ ಹೊರತಾಗಿಯು ನಶೀದ್ 11ದಿನಗಳ ಕಾಲ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಾಲ ಕಳೆದು, ಫೆ. 23ರಂದು ರಾಯಭಾರಿ ಕಚೇರಿಯಿಂದ ಹೊರಬಂದಿದ್ದರು.
ಮಾಲ್ಡಿವ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿರುವ ನಶೀದ್, 2012 ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.