ಸಾಲ ಮರುಪಾವತಿಗಾಗಿ 'ಕಿಂಗ್' ಆಸ್ತಿ ಮುಟ್ಟುಗೊಲು?
ತಿರುಚನಾಪಳ್ಳಿ: ಕಿಂಗ್ ಫಿಶರ್ ಏರ್ಲೈನ್ಸ್ಗೆ ಸಾಲ ನೀಡಿರುವ 17 ಬ್ಯಾಂಕ್ಗಳಲ್ಲಿ ಒಂದಾಗಿರುವ ಎಸ್ಬಿಐ, ಏರ್ಲೈನ್ಸ್ಗೆ ಸಂಬಂಧ ಪಟ್ಟ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲು ಕೇಲವು ಆಸ್ತಿ-ಪಾಸ್ತಿಯನ್ನು ಗುರುತಿಸಿದೆ.
ಕಿಂಗ್ಫಿಶರ್ ಏರ್ಲೈನ್ಸ್ಗೆ ನೀಡಿರುವ ರು.22,000 ಕೋಟಿ ಸಾಲ ಮರುಪಾವತಿ ಸಂಬಂಧ ಏರ್ಲೈನ್ಸ್ನ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲು ಗುರುತಿಸಿಲಾಗಿದೆ ಎಂದು ಎಸ್ಬಿಐನ ಕಾರ್ಯನಿರ್ವಹಣಾ ಅಧಿಕಾರಿ ಎ.ಕೃಷ್ಣಕುಮಾರ್ ತಿಳಿಸಿದ್ದಾರೆ.
ಆಸ್ತಿಗಳ ಬೆಲೆಗಳನ್ನು ಪರಿಶೀಲಿಸಲು ಬ್ಯಾಂಕಿನಿಂದ 4ಸದಸ್ಯ ನೇತೃತ್ವದ ತಂಡ ರಚಿಸಲಾಗಿದ್ದು, ಆಸ್ತಿ ಒಟ್ಟು ಮೌಲ್ಯವನ್ನು ಅಂದಾಜುಮಾಡಲಿದ್ದಾರೆ ಎಂದು ಕೃಷ್ಣಕುಮಾರ್ ಹೇಳಿದ್ದಾರೆ. ಕಳೆದ ವರ್ಷ ವಿಜಯ ಮಲ್ಯ ಅವರ ಮುಂಬೈ ಹಾಗೂ ಗೋವಾದಲ್ಲಿರುವ ರು.120 ಕೋಟಿ ಮೌಲ್ಯದ ಆಸ್ತಿಯನ್ನು ಬ್ಯಾಂಕ್ ಜಪ್ತಿಮಾಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.