ಆಸಿಸ್ ವಿರುದ್ಧ 3, 4ನೇ ಟೆಸ್ಟ್: ಸೆಹ್ವಾಗ್ಗೆ ಕೊಕ್
ಆಸ್ಟ್ರೇಲಿಯಾ ವಿರುದ್ಧದ 3 ಹಾಗೂ 4ನೇ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೀರೇಂದ್ರ ಸೆಹ್ವಾಗ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ...
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 3 ಹಾಗೂ 4ನೇ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೀರೇಂದ್ರ ಸೆಹ್ವಾಗ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಸೆಹ್ವಾಗ್ ಅವರನ್ನು ಕೈ ಬಿಡಲಾಗಿದೆ. ಆಸಿಸ್ ವಿರುದ್ಧ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸೆಹ್ವಾಗ್ ಅವರು ಕೇವಲ 27ರನ್ ಗಳಿಸಿದ್ದರು.
ಆಯ್ಕೆ ಸಮಿತಿಯ ಸದಸ್ಯರು ಸೆಹ್ವಾಗ್ ಅವರ ಸ್ಥಾನಕ್ಕೆ ಬೆರೆಯವರ ಹೆಸರನ್ನು ಸೂಚಿಸಿಲ್ಲವಾದರೂ, ಶಿಖಾರ್ ಧವನ್ ಅಥವಾ ಅಜಿಂಕೆ ರಹನೆ ಅವರು ಮುರಳಿ ವಿಜಯ್ ಅವರೊಂದಿಗೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ.
3,4ನೇ ಟೆಸ್ಟ್ಗೆ ಭಾರತ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ)
ಎಂ.ವಿಜಯ್
ಸಚಿನ್ ತೆಂಡೂಲ್ಕರ್
ವಿರಾಟ್ ಕೊಹ್ಲಿ
ಶಿಖಾರ್ ಧವನ್
ರವೀಂದ್ರ ಜಡೆಜಾ
ಇಶಾಂತ್ ಶರ್ಮಾ
ಬಿ.ಕುಮಾರ್
ಹರಭಜನ್ ಸಿಂಗ್
ಆರ್. ಅಶ್ವಿನ್
ಪ್ರಗ್ಯಾನ್ ಓಜಾ
ಅಜಿಂಕೆ ರಹನೆ
ಅಶೋಕ್ ದಿಂಡಾ
ಚೇತೇಶ್ವರ ಪೂಜಾರ