ಪಾಕ್ ಪ್ರಧಾನಿ ಭೇಟಿಗೆ ಅಜ್ಮೀರ್ ಧಾರ್ಮಿಕ ಮುಖಂಡರ ವಿರೋಧ
ಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರ ಅಜ್ಮೀರ್ ಭೇಟಿಯನ್ನು ಅಜ್ಮೀರ್ನ ಖ್ಯಾತ ಖ್ವಾಜಾ ಮೋಯಿನುದ್ದಿನ್ ಚಿಸ್ತಿ ಮಸೀದಿಯ..
ಅಜ್ಮೀರ್: ಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರ ಅಜ್ಮೀರ್ ಭೇಟಿಯನ್ನು ಅಜ್ಮೀರ್ನ ಖ್ಯಾತ ಖ್ವಾಜಾ ಮೋಯಿನುದ್ದಿನ್ ಚಿಸ್ತಿ ಮಸೀದಿಯ ಧಾರ್ಮಿಕ ಮುಖಂಡರು ಶುಕ್ರವಾರ ತೀವ್ರವಾಗಿ ವಿರೋಧಿಸಿದ್ದಾರೆ.
ಪಾಕ್ ಪ್ರಧಾನಿ ಭೇಟಿಯನ್ನು ವಿರೋಧಿಸಿರುವ ಖ್ವಾಜಾ ಮೋಯಿನುದ್ದಿನ್ ಚಿಸ್ತಿಯ ದಿವಾನ ಝೈನುಲ್ ಅಬೆದಿನ್ ಅಲಿ ಖಾನ್ ಅವರು, ಪಾಕ್ ಸೈನಿಕರು ಭಾರತೀಯ ಸೈನಿಕರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿದ್ದು, ಇದನ್ನು ತಾವು ಬಲವಾಗಿ ಖಂಡಿಸುವುದಾಗಿ ಹೇಳಿದ್ದಾರೆ.
ಅವರು(ಪಾಕ್ ಪ್ರಧಾನಿ) ಮಸೀದಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಬೇಕಾದರೆ, ಮೊದಲು ಆ ಇಬ್ಬರು ಭಾರತೀಯ ಸೈನಿಕರ(ಹೇಮರಾಜ್ ಮತ್ತು ಸುಧಾಕರ್ ಸಿಂಗ್) ತಲೆಯನ್ನು ವಾಪಸ್ ತರಲಿ. ಇಲ್ಲವೇ ಭಾರತದ ಪ್ರಧಾನಿ ಬಳಿ ಹಾಗೂ ಸೈನಿಕರ ಕುಟುಂಬಕ್ಕೆ ಕ್ಷಮೆಯಾಚಿಸಲಿ ಎಂದು ಅಲಿ ಖಾನ್ ಅವರು ಅಗ್ರಹಿಸಿದ್ದಾರೆ.
ಇಂದು ಸಂಜೆ ಪಾಕಿಸ್ತಾನದಿಂದ ಜೈಪುರಕ್ಕೆ ಆಗಮಿಸುವ ರಾಜಾ ಫರ್ವೇಜ್ ಅಶ್ರಫ್ ಅವರು, ಇಂದು ರಾತ್ರಿ ಜೈಪುರದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದು, ನಾಳೆ ಮುಂಜಾನೆ ಮಸೀದಿಗೆ ಭೇಟಿ ನೀಡಲಿದ್ದಾರೆ.