ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲಾಡನ್ ಅಳಿಯನನ್ನು ಬಂಧಿಸಿದ ಅಮೆರಿಕ

ಅಲ್ ಖೈದಾ ಪ್ರಮುಖ ನಾಯಕನಾಗಿದ್ದ ಒಸಾಮಾ ಬಿನ್ ಲಾಡನ್‌ನ ಅಳಿಯ, ಸಂಘಟನೆಯ ವಕ್ತಾರ ಸುಲೇಮಾನ್ ಅಬು ಹೈತಿಯನ್ನು ಬಂಧಿಸಿ...

Parashurama
Updated On : 8 Mar 2013, 1:29 am

ವಾಷಿಂಗ್ಟನ್ ಡಿ.ಸಿ: ಅಲ್ ಖೈದಾ ಪ್ರಮುಖ ನಾಯಕನಾಗಿದ್ದ ಒಸಾಮಾ ಬಿನ್ ಲಾಡನ್‌ನ ಅಳಿಯ, ಸಂಘಟನೆಯ ವಕ್ತಾರ ಸುಲೇಮಾನ್ ಅಬು ಹೈತಿಯನ್ನು ಬಂಧಿಸಿ ಅಮೆರಿಕಕ್ಕೆ ಕರೆತರಲಾಗಿದೆ ಎಂದು ಫೆಡರಲ್ ಬಿರೋ ಆಫ್ ಇನ್‌ವೆಸ್ಟ್‌ಗೇಶನ್(ಎಫ್‌ಬಿಐ) ಶುಕ್ರವಾರ ತಿಳಿಸಿದೆ.

ಭಯೋತ್ವಾದನಾ ದುಷ್ಕೃತ್ಯದಲ್ಲಿ ಸಕ್ರಿಯವಾಗಿದ್ದ ಇವನನ್ನು ಅಮೆರಿಕ ಸೇನೆ ಬಂಧಿಸಿದ್ದು, ಶುಕ್ರವಾರ ಇತನನ್ನು ನ್ಯೂಯಾರ್ಕ್ ನ್ಯಾಯಾಲಕ್ಕೆ ಹಾಜರುಪಡಿಸಲಾಗುವುದು ಎಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅರ್ಟಾನಿ ಜನರಲ್ ಎರಿಕ್, ಅಮೆರಿಕದ ಪ್ರಜೆಗಳ ಜೀವಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಇತನನ್ನು ಬಂಧಿಸಲಾಗಿದೆ. ಈ ಬಂಧನದಿಂದ ಅಮೆರಿಕ ಜನತೆಗೆ ಯಾರೆ ಹಾನಿ ಮಾಡಿದರು ಅವರಿಗೆ ತಕ್ಕ ಶಾಸ್ತಿ ಮಾಡುತ್ತೆವೆ ಎಂಬ ಸರಿಯಾದ ಸಂದೇಶ ಭಯೋತ್ವಾದಕರಿಗೆ ತಲುಪುತ್ತದೆ ಎಂದರು. ನಮ್ಮ ರಾಷ್ಟ್ರದ ಪ್ರಜೆಗಳಿಗೆ ಹಾನಿ ಮಾಡಿದ ವ್ಯಕ್ತಿ ವಿಶ್ವದಲ್ಲಿ ಎಲ್ಲೇ ಅವಿತುಕೊಂಡಿದ್ದರು ಆತನನ್ನು ಹಿಡಿದು ಶಿಕ್ಷಿಸುತ್ತೆವೆ. ಈ ಮೂಲಕ ಅಮೆರಿಕ ಜನತೆಗೆ ನ್ಯಾಯ ಒದಗಿಸುತ್ತೆವೆ ಎಂದು ಎರಿಕ್ ಹೇಳಿದ್ದಾರೆ.

ಅಬು ಹೈತಿ ಬಂಧನದಿಂದ ಭಯೋತ್ಪಾದನೆ ಮಟ್ಟಹಾಕುವಲ್ಲಿ ಮೈಲುಗಲ್ಲು ಸಾಧಿಸಿದಂತಾಗಿದೆ ಎಂದು ಅಮೆರಿಕದ ಸಹಾಯಕ ಅರ್ಟಾನಿ ಜನರಲ್ ಲೀಸಾ ಮನಾಕೋ ತಿಳಿಸಿದ್ದಾರೆ.

ಸತತ 13 ವರ್ಷಗಳಿಂದ ಅಬು ಹೈತಿ ಒಸಾಮಾ ಬಿನ್ ಲಾಡನ್ ಜೊತೆ ಭಯೋತ್ಪಾದನಾ ಕಾರ್ಯದಲ್ಲಿ ತೊಡಗಿದ್ದ. ಅಮೆರಿಕದಲ್ಲಿ ನಡೆದ 9/11 ವಿಶ್ವ ವಾಣಿಜ್ಯ ಸಂಕಿರ್ಣ ಕಟ್ಟಡ ಧ್ವಂಸಗೊಳಿಸುವಲ್ಲಿ ಲಾಡನ್‌ಗೆ ಈತ ಸಹಾಯ ಮಾಡಿದ್ದ. ಇದಲ್ಲದೆ ವಿಶ್ವಾದ್ಯಂತ ಹಲವು ಭಯೋತ್ಪಾದನಾ ದೃಷ್ಕೃತ್ಯಗಳಲ್ಲಿ ತೊಡಿಗಿಕೊಂಡಿದ್ದ ಎನ್ನಲಾಗಿದೆ.

ಅವಳಿ ಕಟ್ಟಡ ಬಾಂಬ್ ಸ್ಫೋಟ್‌ದ ನಂತರ ಇತನನ್ನು ಅಮೆರಿಕದ ಸೇನೆ ಹುಡುಕುತ್ತಿತ್ತು. ಪಾಕಿಸ್ತಾನದ ಅಬೋಟಾ ಬಾದ್‌ನಲ್ಲಿ ಬಿನ್ ಲ್ಯಾಡನ್‌ನನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ಇತನ ಬಗ್ಗೆ ಅಲ್ಲಿ ಯಾವುದೇ ಸುಳಿವು ಸೇನೆಗೆ ಸಿಕ್ಕಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments