ಗುಜರಾತ್ ಸ್ಫೋಟಕ್ಕೆ ಯಾಸಿನ್ ಭಟ್ಕಳ್ ಸಂಚು?
ಕರ್ನಾಟಕ ಮೂಲದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸಿನ್ ಭಟ್ಕಳ್ ಕಣ್ಮು ಈಗ ಗುಜರಾತ್ ಮೇಲೆ ಬಿದ್ದಿದೆ...
ನವದೆಹಲಿ: ಕರ್ನಾಟಕ ಮೂಲದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸಿನ್ ಭಟ್ಕಳ್ ಕಣ್ಮು ಈಗ ಗುಜರಾತ್ ಮೇಲೆ ಬಿದ್ದಿದೆ. ಹೈದರಾಬಾದ್ ಅವಳಿ ಸ್ಫೋಟದ ನಂತರ ಗುಜರಾತ್ನಲ್ಲಿ ಬಾಂಬ್ ಸ್ಫೋಟಿಸಲು ಯಾಸಿನ್ ಭಟ್ಕಳ್ ಸಂಚು ರೂಪಿಸಿದ್ದಾನೆ ಎಂಬ ಆತಂಕಕಾರಿ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಶನಿವಾರ ನೀಡಿದೆ.
ಇತ್ತೀಚಿನ ಹೈದರಾಬಾದ್ ಸ್ಫೋಟ ಪ್ರಕರಣ ಸೇರಿದಂತೆ ದೇಶದ ಹಲವು ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಯಾಸಿನ್ ಭಟ್ಕಳ್, ಇದೀಗ ಅಹಮದಾಬಾದ್ನಲ್ಲೂ ತನ್ನ ದುಷ್ಕೃತ್ಯ ಎಸಗಲು ಸಂಚು ನಡೆಸಿದ್ದಾನೆ.
ಈ ಕುರಿತು ಗುಪ್ತಚರ ಇಲಾಖೆ ಗುಜರಾತ್ಗೆ ಮಾಹಿತಿ ನೀಡಿದ್ದು, ಗುಜರಾತ್ ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಿಧಿಸಲಾಗಿದೆ.