ಪಾಕ್ನಲ್ಲಿ ಸ್ಫೋಟ: 6 ಸಾವು, 28 ಜನರಿಗೆ ಗಾಯ
ಇಸ್ಲಾಮಾಬಾದ್: ಪೇಶಾವರ್ನ ಮಸೀದಿಯೊಂದರಲ್ಲಿ ಶನಿವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದಾರೆ ಮತ್ತು 28 ಜನ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಮಸೀದಿಯ ಒಳಗಡೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಆರು ಜನ ಮೃತಪಟ್ಟಿದ್ದಾರೆ ಎಂದು ಪೇಶಾವರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖಲಿದ್ ಹಮ್ದಾನಿ ತಿಳಿಸಿದ್ದಾರೆ.
ನಗರದ ಶಹೀನ್ ಬಜಾರ್ನಲ್ಲಿರುವ ಗಂಜ್ ಅಲಿ ಖಾನ್ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರು ಜನ ಮೃತಪಟ್ಟಿದ್ದಾರೆ ಮತ್ತು 28 ಜನ ಗಾಯಗೊಂಡಿದ್ದಾರೆ ಎಂದು ಡಾನ್ ಟೀವಿ ವರದಿ ಮಾಡಿದೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೀಯೊ ಟೀವಿ ವರದಿ ಮಾಡಿದೆ.