ಹತ್ಯೆಗಿಡಾದ ಡಿಎಸ್ಪಿ ಕುಟುಂಬಕ್ಕೆ ರಾಹುಲ್ ಸಾಂತ್ವಾನ
ಲಖನೌ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹತ್ಯೆಗಿಡಾದ ಪ್ರತಾಪಗಡ ಡಿಎಸ್ಪಿ ಝಿಯಾ-ಉಲ್-ಹಕ್ ಅವರ ಕುಟುಂಬವನ್ನು ಶನಿವಾರ ಭೇಟಿ ಮಾಡಿದ್ದು, ಪೊಲೀಸ್ ಅಧಿಕಾರಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಗೋರಖಪುರದಿಂದ ಡಿಯೊರಿಯ ಗ್ರಾಮಕ್ಕೆ ತೆರಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಕ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು ಮತ್ತು ಡಿಎಸ್ಪಿ ಹಾಗೂ ಕುಂದ ಗ್ರಾಮದ ಪ್ರಧಾನ ನನ್ಹೆ ಯಾದವ್ ಅವರ ಹತ್ಯೆಗೆ ಸಂತಾಪ ಸೂಚಿಸಿದರು.
ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಮನೆಯ ಸುತ್ತ ಭಾರಿ ಭದ್ರತೆ ಒದಗಿಸಲಾಗಿತ್ತು ಮತ್ತು ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಡಿಎಸ್ಪಿ ಕುಟುಂಬವನ್ನು ಭೇಟಿ ಮಾಡಿ, 20ಲಕ್ಷ ರುಪಾಯಿ ಪರಿಹಾರದ ಚೆಕ್ನ್ನು ನೀಡಿದ್ದರು.